* ಭಾರತದ ‘ಕಾಳು ಮೆಣಸಿನ ರಾಣಿ’ ಎಂದೇ ಖ್ಯಾತಿಯ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದಾರೆ.* ಈ ವಿಶೇಷ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪಲ್ಹಾದ ಜೋಶಿ ಫೋಟೊ ಹಂಚಿಕೊಂಡಿದ್ದಾರೆ.* ಕರ್ನಾಟಕದ ಗೇರುಸೊಪ್ಪೆಯ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡ ರಾಣಿ ಚೆನ್ನಭೈರಾದೇವಿಗೆ ಪೋರ್ಚುಗೀಸರು ‘ರೈನಾ ಡಾ ಪಿಮೆಂಟಾ’ ಎಂದು ಕರೆದು ಗೌರವಿಸುತ್ತಿದ್ದರು. ಅವರು 54 ವರ್ಷಗಳ ಕಾಲ ತಮ್ಮ ರಾಜ್ಯವನ್ನು ರಕ್ಷಿಸಿದ್ದ ಶಕ್ತಿಯ ಪ್ರತೀಕ.* ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಉಪಸ್ಥಿತರಿದ್ದರು.