* ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್ಲ್ಯಾಂಡ್) ಮತ್ತೆ ಭಾರತದ 2 ಪ್ರದೇಶಗಳು ಸೇರ್ಪಡೆಯಾಗಿವೆ. * ರಾಜಸ್ಥಾನದ ಪಾಲೋಡಿ ಜಿಲ್ಲೆಯ ಪಾಲೋಡಿ ತಾಲ್ಲೂಕಿನ ಖಿಚನ್ ಜೌಗು ಪ್ರದೇಶ ಹಾಗೂ ರಾಜಸ್ಥಾನದ ಉದಯಪುರ ಜಿಲ್ಲೆಯ ಮೆನಾರ್ ಜೌಗು ಪ್ರದೇಶ ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಮೂಲಕ ರಾಮ್ಸರ್ ಪಟ್ಟಿಗೆ ಸೇರ್ಪಡೆಯಾದ ಜೌಗು ಭೂಮಿ ಪ್ರದೇಶಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.* ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ವಿಷಯವನ್ನು ಎಕ್ಸ್ ಮೂಲಕ ತಿಳಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಕೊಟ್ಟ ಮಹತ್ವದಿಂದಾಗಿಯೇ ಭಾರತದಲ್ಲಿ ರಾಮ್ಸರ್ ಪಟ್ಟಿಗೆ ಸೇರಿರುವ ಜೌಗು ಪ್ರದೇಶಗಳ ಸಂಖ್ಯೆ ಬೆಳೆಯುತ್ತಾ ಇದೆ ಎಂದು ತಿಳಿಸಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರೂ ಈ ಕುರಿತು ಸಂತಸ ಹಂಚಿಕೊಂಡಿದ್ದು, ಭಾರತಕ್ಕೆ ಇದೊಂದು ದೊಡ್ಡ ವಿಷಯ. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚುತ್ತಿರುವ ನಡೆಯನ್ನು ಇದು ಹೇಳುತ್ತದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ* ಕಳೆದ ವರ್ಷ ತಮಿಳುನಾಡಿನ ನಂಜರಾಯನ್ ಪಕ್ಷಿಧಾಮ, ಕಾಜುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತಾವಾ ಸಂರಕ್ಷಿತ ಪ್ರದೇಶವನ್ನು ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದವು.* ಭಾರತದಲ್ಲಿ 10.36 ಲಕ್ಷ ಹೆಕ್ಟರ್ಗೂ ಹೆಚ್ಚು ವ್ಯಾಪ್ತಿಯ ರಾಮ್ಸರ್ ಜೌಗುಭೂಮಿ ಇದೆ. ಭಾರತದಲ್ಲಿ ತಮಿಳುನಾಡು (18) ಅತಿ ಹೆಚ್ಚು ಜೌಗುಭೂಮಿಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (10) ಇದೆ.* ಕೇಂದ್ರ ಸರ್ಕಾರದ ಹಲವಾರು ಪರಿಸರಸ್ನೇಹಿ ಕ್ರಮಗಳಿಂದ ಭಾರತದಲ್ಲಿ 2014 ರಿಂದ 2024ರ ಹತ್ತು ವರ್ಷಗಳ ಅವಧಿಯಲ್ಲಿ 41 ರಾಮ್ಸರ್ ಮಾನ್ಯತೆಯ ಜೌಗುಭೂಮಿಗಳನ್ನು ಗುರುತಿಸಲಾಗಿದೆ. ಮೊದಲು ಇವುಗಳ ಸಂಖ್ಯೆ ಕೇವಲ 25 ಇತ್ತು ಎಂದು ಯಾದವ್ ತಿಳಿಸಿದ್ದರು.* 1971ರ ಫೆಬ್ರುವರಿ 2 ರಂದು ಇರಾನಿನ ರಾಮ್ಸರ್ ನಗರದಲ್ಲಿ ಜೌಗುಭೂಮಿ ಸಮಾವೇಶವನ್ನು ಅಂಗೀಕರಿಸಲಾಗಿತ್ತು. ಆ ಮೂಲಕ ವಿಶ್ವದ ವೈವಿಧ್ಯಮಯ ಜಲಮೂಲಗಳ ಸಂರಕ್ಷಣೆ, ಪ್ರಾಣಿ–ಪಕ್ಷಿಗಳ ಸಂರಕ್ಷಣೆಯ ಉದ್ದೇಶವನ್ನು ಇದು ಹೊಂದಿದೆ.