* ರಾಮ್ಸರ್ ಚೌಗುಭೂಮಿಗಳ 15ನೇ ಅಂತರರಾಷ್ಟ್ರೀಯ ಸಮಾವೇಶವು ಜುಲೈ 23ರಿಂದ ಜಿಂಬಾಬ್ವೆಯ ವಿಕ್ಟೋರಿಯಾ ಜಲಪಾತದಲ್ಲಿ ಆರಂಭವಾಗಿದೆ.* 172 ದೇಶಗಳಿಂದ 3,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ಜೌಗುಭೂಮಿಗಳ ಉಳಿವಿಗಾಗಿ ತುರ್ತು ಕ್ರಮಗಳನ್ನು ಚರ್ಚಿಸುತ್ತಿದ್ದಾರೆ.* ಚೌಗು ಪ್ರದೇಶಗಳು ಭೂಮಿಯ ಆರೋಗ್ಯವನ್ನು ಕಾಪಾಡಲು ಅತ್ಯಂತ ಅಗತ್ಯ. ಇವು ನೀರಿನ ಚಕ್ರವನ್ನು ನಿಯಂತ್ರಿಸಿ, ಇಂಗಾಲ ಶೋಷಿಸಿ, ಜೀವವೈವಿಧ್ಯತೆಯನ್ನು ಉಳಿಸುತ್ತವೆ. ಈ ಪ್ರದೇಶಗಳು ಮಾಲಿನ್ಯ ಶೋಧನೆಗೂ ಸಹಕಾರಿ.* ಪ್ರಸ್ತುತ, ಜೌಗುಭೂಮಿಗಳು ನಗರೀಕರಣ, ಕೃಷಿ, ಹವಾಮಾನ ಬದಲಾವಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ತೀವ್ರವಾಗಿ ಬೆದರಿಕೆಯೊಳಗಾಗಿವೆ.* ‘ಗ್ಲೋಬಲ್ ವೆಟ್ಲ್ಯಾಂಡ್ ಔಟ್ಲುಕ್ 2025’ ಪ್ರಕಾರ, 2050ರ ವೇಳೆಗೆ ಶೇ.20ರಷ್ಟು ಚೌಗುಭೂಮಿಗಳು ನಾಶವಾಗಬಹುದು ಎಂದು ಎಚ್ಚರಿಸಲಾಗಿದೆ.* ಚೌಗುಭೂಮಿಗಳ ಸಂರಕ್ಷಣೆಗೆ ತಕ್ಷಣವೇ ಗಂಭೀರ ಕ್ರಮಕೈಗೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಸಮಾವೇಶ ಪುನರುಚ್ಚರಿಸಿದೆ.