* ರಾಮ್‌ರಾಜ್‌ ಕಾಟನ್‌ ಸಂಸ್ಥೆಯ ಹೊಸ ಪ್ರಚಾರ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ ಅವರು ನೇಮಕವಾಗಿದ್ದಾರೆ.* ರಿಷಬ್‌ ಅವರು ಸರಳ ಸಜ್ಜನಿಕೆಯ ನಟ ಅವರಿಗೆ ಪರಂಪರೆಯ ಬೇರುಗಳ ಜೊತೆಗೆ ಆಪ್ತ ನಂಟಿದೆ. ರಿಷಬ್‌ ಅವರು ರಾಮ್‌ರಾಜ್‌ ಬ್ರ್ಯಾಂಡ್‌ ಜೊತೆಗೆ ಕೈಜೋಡಿಸಿರುವುದು ಅತ್ಯಂತ ಗೌರವ ಹಾಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅರುಣ್‌ ಈಶ್ವರ್‌ ಅವರು ತಿಳಿಸಿದ್ದಾರೆ.* ರಿಷಬ್‌ ಅವರ ಸೃಜನಾತ್ಮಕ ನಟನಾ ಸಾಮರ್ಥ್ಯವು ‘ಕಾಂತಾರ’ ಸಿನಿಮಾ ಮೂಲಕ ನಿರೂಪಿತವಾಗಿದೆ. ಪಾರಂಪರಿಕೆ ಉಡುಗೆಯಾದ ಪಂಚೆಯನ್ನು ಉಡುವ ಭಾರತದ ಕೆಲವೇ ನಟರ ಪೈಕಿ ಅವರೂ ಒಬ್ಬರಾಗಿದ್ದಾರೆ. ಸಾಂಸ್ಕೃತಿಕ ಉತ್ಪನ್ನಗಳ ಬಗ್ಗೆ ಸಂಸ್ಥೆ ಮತ್ತು ರಿಷಬ್‌ ಅವರ ನಂಬಿಕೆ ಒಂದೇ ಆಗಿದೆ ಎಂದಿದ್ದಾರೆ.* ರಾಮ್‌ರಾಜ್‌ ಬ್ರ್ಯಾಂಡ್‌ ದಕ್ಷಿಣ ಭಾರತವನ್ನು ದಾಟಿ ಉತ್ತರ ಭಾರತಕ್ಕೂ ಪ್ರವೇಶಿಸುತ್ತಿದೆ. ರಿಷಬ್‌ ಅವರೊಂದಿಗಿನ ಬೆಸುಗೆಯು ನಮ್ಮ ಬ್ರ್ಯಾಂಡ್‌ಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.* ರಾಮ್‌ರಾಜ್‌ ‘ಸಂಸ್ಥೆಯ ಸಂಸ್ಥಾಪಕರಾದ ನಾಗರಾಜನ್‌ ಅವರ ಸರಳತೆ, ಸಾಮಾಜಿಕ ಕೆಲಸಗಳು ನನ್ನನ್ನು ರಾಯಭಾರಿಯಾಗಿ ಒಪ್ಪಿಕೊಳ್ಳುವಂತೆ ಮಾಡಿವೆ’ ಎಂದು ನಟ ರಿಷಬ್‌ ಪ್ರತಿಕ್ರಿಯಿಸಿದ್ದಾರೆ.