* ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ ನಂತರ, ಅವರು ತಮ್ಮ ಜಿಲ್ಲೆಯಾದ ರಾಮನಗರದ ಹೆಸರನ್ನು "ಬೆಂಗಳೂರು ದಕ್ಷಿಣ" ಎಂದು ಮರುನಾಮಕರಣ ಮಾಡುವ ನಿಲುವು ತೆಗೆದುಕೊಂಡು, ಡಿಕೆಶಿ ತಮ್ಮ ಉದ್ದೇಶ ಸಾಧಿಸಿದ್ದಾರೆ.* 2007ರ ಆಗಸ್ಟ್ನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ರೂಪಿಸಿದ್ದು, ಅದರ ಹೆಸರಿನ ಬಗ್ಗೆ ಆಗಿನಿಂದಲೇ ಡಿಕೆಶಿ ಹಾಗೂ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.* ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆಶಿಗೆ ಉಪ ಮುಖ್ಯಮಂತ್ರಿಯ ಸ್ಥಾನ ದೊರಕಿದ ಬಳಿಕ, ಈ ಮರುನಾಮಕರಣ ಪ್ರಕ್ರಿಯೆಗೂ ಬಲ ಒದಗಿತು. ಜೆಡಿಎಸ್ ಸೇರಿದಂತೆ ಕೆಲವರು ವಿರೋಧಿಸಿದರೂ ಡಿಕೆಶಿ ತಮ್ಮ ಉದ್ದೇಶದಿಂದ ಹಿಂದೆ ಸರಲಿಲ್ಲ.* 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿ, 2024ರ ಉಪ ಚುನಾವಣೆಯಲ್ಲೂ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ, ಸಂಪೂರ್ಣ ಪ್ರಾಬಲ್ಯ ಸಾಧಿಸಿತು.* ಈ ಗೆಲುವಿನ ಬೆನ್ನಲ್ಲೇ ಜಿಲ್ಲೆ ಹೆಸರನ್ನು ಬದಲಾಯಿಸುವ ಮೂಲಕ ಡಿಕೆಶಿ ತಮ್ಮ ರಾಜಕೀಯ ಉದ್ದೇಶವನ್ನು ಸಾಧಿಸಿದ್ದಾರೆ.* ಈ ಹೆಸರಿನ ಬದಲಾವಣೆಯಿಂದ ಎಚ್ಡಿಕೆ ಮತ್ತು ಡಿಕೆಶಿ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳಬಹುದು. ಇದರ ಮುಂದಿನ ಆಯಾಮಗಳು ಹೇಗಿರುತ್ತವೆ ಎಂಬುದನ್ನು ಸಮಯವೇ ತೋರಿಸಬೇಕು.