* ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ, ಮಾಜಿ ರಾಜತಾಂತ್ರಿಕ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ ಸೇರಿದಂತೆ ನಾಲ್ಕು ಮಂದಿ ಗಣ್ಯರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.* ಉಜ್ವಲ್ ನಿಕ್ಕಂ, ಹರ್ಷವರ್ದನ್ ಶ್ರಿಂಗ್ಲಾ, ಸಿ ಸದಾನಂದನ್ ಮಾಸ್ತೆ ಹಾಗು ಡಾ. ಮೀನಾಕ್ಷಿ ಜೈನ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ* ಭಾರತೀಯ ಸಂವಿಧಾನದ ವಿಧಿ 80(1)(A) ರ ಅಡಿಯಲ್ಲಿ ನಾಮನಿರ್ದೇಶನ ಮಾಡಿದ್ದು ಸಾಹಿತ್ಯ, ವಿಜ್ಞಾನ, ಕಲೆ ಅಥವಾ ಸಾಮಾಜಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಮಂದಿಯನ್ನು ರಾಜ್ಯಸಭೆಗೆ ನೇಮಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಲಾಗಿದೆ* ಈ ಹಿಂದೆ ನಾಮನಿರ್ದೇಶನಗೊಂಡ ಸದಸ್ಯರ ನಿವೃತ್ತಿಯಿಂದ ತೆರವಾಗಿದ್ದ ನಾಲ್ಕು ಸ್ಥಾನಗಳಿಗೆ ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದೆ* ಉಜ್ವಲ್ ದಿಯೋರಾವ್ ನಿಕಂ ಅವರು 26/11 ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ಹಲವಾರು ಉನ್ನತ ಮಟ್ಟದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾದ ಪ್ರಸಿದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ.* ಸಿ ಸದಾನಂದನ್ ಮಾಸ್ತೆ ಅವರು ದಶಕಗಳ ತಳಮಟ್ಟದ ಅನುಭವ ಹೊಂದಿರುವ ಕೇರಳದ ಸಮಾಜ ಸೇವಕ ಮತ್ತು ಶಿಕ್ಷಣ ತಜ್ಞರಾಗಿ ತಮ್ಮದೇ ಆದ ಹೆಸರು ಮಾಡಿದ್ದಾರೆ.* ಹರ್ಷವರ್ಧನ್ ಶ್ರಿಂಗ್ಲಾ: ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಪ್ರಮುಖ ಜಾಗತಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ ರಾಜತಾಂತ್ರಿಕ ಅನುಭವ ಹೊಂದಿದ್ದಾರೆ.* ಡಾ. ಮೀನಾಕ್ಷಿ ಜೈನ್: ಪ್ರಸಿದ್ಧ ಇತಿಹಾಸಕಾರ ಮತ್ತು ಶೈಕ್ಷಣಿಕ, ಭಾರತೀಯ ಐತಿಹಾಸಿಕ ಪಾಂಡಿತ್ಯಕ್ಕೆ ನೀಡಿದ ಕೊಡುಗೆಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಈ ನಾಲ್ಕು ಮಂದಿಯನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.