* ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ “ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ಮಾಡುತ್ತದೆ. 2025ನೇ ಸಾಲಿನ ಪ್ರಶಸ್ತಿ ಪ್ರಕಟಣೆ ಈ ಬಾರಿ ಕೆಲವು ವಿಶೇಷತೆಗಳೊಂದಿಗೆ ಗಮನ ಸೆಳೆದಿದೆ.* ಈ ವರ್ಷ ಒಟ್ಟು 70 ಮಂದಿ ವ್ಯಕ್ತಿಗಳು ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.ಈ ಪಟ್ಟಿಯಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಹೆಸರು ಕಾಣಿಸಿಕೊಂಡಿದ್ದು, ಅವರು ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನೀಡಿದ ಕಲಾತ್ಮಕ ಕೊಡುಗೆಯನ್ನು ಗುರುತಿಸಲಾಗಿದೆ.* ಸಾಹಿತ್ಯ, ಜಾನಪದ,  ಸಂಗೀತ / ನೃತ್ಯ,  ಚಿತ್ರರಂಗ / ಕಿರುತೆರೆ,  ಕಲೆ ಮತ್ತು ಸಂಸ್ಕೃತಿ, ವೈದ್ಯಕೀಯ, ಸಮಾಜ ಸೇವೆ, ಪರಿಸರ ಸಂರಕ್ಷಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ,ಕರಕುಶಲ / ಶಿಲ್ಪಕಲೆ ಮುಂತಾದವು ಪ್ರಶಸ್ತಿ ಪಡೆದವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.# ಪ್ರತಿ ಪುರಸ್ಕೃತರಿಗೆ:25 ಗ್ರಾಂ ಚಿನ್ನದ ಪದಕ,₹5 ಲಕ್ಷ ನಗದು ಬಹುಮಾನಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ. ಬಹುಮಾನ ರಾಜ್ಯದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ.* ಈ ಬಾರಿ ಕೆವಲ ವ್ಯಕ್ತಿಗಳು ಮಾತ್ರ ಆಯ್ಕೆಯಾಗಿದ್ದು,ಯಾವುದೇ ಸಂಘ / ಸಂಸ್ಥೆಗಳು ಪಟ್ಟಿಗೆ ಸೇರಲಾಗಿಲ್ಲ.ಇದು ಈ ವರ್ಷದ ಪ್ರಮುಖ ಬದಲಾವಣೆ.* ಈ ಪಟ್ಟಿಯಲ್ಲಿ ಗ್ರಾಮ ಮಟ್ಟದ ಕಲಾವಿದರು, ಶಿಲ್ಪಿಗಳು, ಶಿಕ್ಷಕರು, ರಂಗಭೂಮಿ ಕಲಾವಿದರು, ವೈದ್ಯರು, ಪರಿಸರ ಸಂರಕ್ಷಕರು, ರೈತರು ಮುಂತಾದ ಜನಾಮಟ್ಟದ ಸಾಧಕರಿಗೂ ಸ್ಥಾನ ನೀಡಲಾಗಿದೆ.🎗 ರಾಜ್ಯೋತ್ಸವ ಪ್ರಶಸ್ತಿ – ಮಹತ್ವ:-ಈ ಪ್ರಶಸ್ತಿ:✅ ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಗುರುತಿನ ಅಭಿವೃದ್ಧಿಗೆ ಕೊಡುಗೆ ನೀಡುವವರನ್ನು ಗೌರವಿಸುತ್ತದೆ✅ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಾನ್ಯತೆ ನೀಡುತ್ತದೆ✅ ಯುವ ಪೀಳಿಗೆಗೆ ಸ್ಪೂರ್ತಿ2025ರ ರಾಜ್ಯೋತ್ಸವ ಪ್ರಶಸ್ತಿಗಳು:* ಕಲೆ, ಸಂಸ್ಕೃತಿ, ಸಮಾಜ ಅಭಿವೃದ್ಧಿಯಲ್ಲಿ ತೊಡಗಿರುವ ಸಾಧಕರಿಗೆ ಪ್ರೋತ್ಸಾಹ ನೀಡಿವೆ.* ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿಯನ್ನು ಹಿರಿಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಸಾಹಿತಿಗಳಾದ ಪ್ರೊ.ರಾಜೇಂದ್ರ ಚೆನ್ನಿ,ರಹಮತ ತರೀಕೆರೆ,ಸಂಗೀತ ಕಲಾವಿದ ದೇವೇಂದ್ರಕುಮಾರ ಪತ್ತಾರ,ಸೂಲಗಿತ್ತಿ ಈರಮ್ಮ,ನಟ ಪ್ರಕಾಶ ರಾಜ,ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಸೇರಿ 70 ಗಣ್ಯರಿಗೆ 70 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.* ಕನ್ನಡ ಮತ್ತು ಸಂಸ್ಕೃತ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದರು.ಮಹನೀಯರಿಗೆ ನವೆಂಬರ್ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.* ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಒಟ್ಟು 24 ವಿಭಾಗಳಲ್ಲಿ ಗಣ್ಯರಿಗೆ ನೀಡಿ ಅವರನ್ನು ಗೌರವಿಸಲಾಗಿದೆ.