Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಾಜ್ಯೋತ್ಸವ 2025 ಗೌರವ ಪಟ್ಟಿ ಬಿಡುಗಡೆ: ಪ್ರಕಾಶ್ ರಾಜ್ ಸೇರಿ ಗಣ್ಯರಿಗೆ ಪ್ರಶಸ್ತಿ
31 ಅಕ್ಟೋಬರ್ 2025
* ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ
“ರಾಜ್ಯೋತ್ಸವ
ಪ್ರಶಸ್ತಿ”
ಪ್ರದಾನ ಮಾಡುತ್ತದೆ. 2025ನೇ ಸಾಲಿನ ಪ್ರಶಸ್ತಿ ಪ್ರಕಟಣೆ ಈ ಬಾರಿ ಕೆಲವು ವಿಶೇಷತೆಗಳೊಂದಿಗೆ ಗಮನ ಸೆಳೆದಿದೆ.
* ಈ ವರ್ಷ ಒಟ್ಟು 70 ಮಂದಿ ವ್ಯಕ್ತಿಗಳು ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.ಈ ಪಟ್ಟಿಯಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಹೆಸರು ಕಾಣಿಸಿಕೊಂಡಿದ್ದು, ಅವರು ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನೀಡಿದ ಕಲಾತ್ಮಕ ಕೊಡುಗೆಯನ್ನು ಗುರುತಿಸಲಾಗಿದೆ.
* ಸಾಹಿತ್ಯ, ಜಾನಪದ, ಸಂಗೀತ / ನೃತ್ಯ, ಚಿತ್ರರಂಗ / ಕಿರುತೆರೆ, ಕಲೆ ಮತ್ತು ಸಂಸ್ಕೃತಿ, ವೈದ್ಯಕೀಯ, ಸಮಾಜ ಸೇವೆ, ಪರಿಸರ ಸಂರಕ್ಷಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ,ಕರಕುಶಲ / ಶಿಲ್ಪಕಲೆ ಮುಂತಾದವು ಪ್ರಶಸ್ತಿ ಪಡೆದವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
#
ಪ್ರತಿ ಪುರಸ್ಕೃತರಿಗೆ:25 ಗ್ರಾಂ ಚಿನ್ನದ ಪದಕ,₹5 ಲಕ್ಷ ನಗದು ಬಹುಮಾನಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ.
ಬಹುಮಾನ ರಾಜ್ಯದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ.
* ಈ ಬಾರಿ ಕೆವಲ ವ್ಯಕ್ತಿಗಳು ಮಾತ್ರ ಆಯ್ಕೆಯಾಗಿದ್ದು,ಯಾವುದೇ ಸಂಘ / ಸಂಸ್ಥೆಗಳು ಪಟ್ಟಿಗೆ ಸೇರಲಾಗಿಲ್ಲ
.ಇದು ಈ ವರ್ಷದ ಪ್ರಮುಖ ಬದಲಾವಣೆ.
* ಈ ಪಟ್ಟಿಯಲ್ಲಿ ಗ್ರಾಮ ಮಟ್ಟದ ಕಲಾವಿದರು, ಶಿಲ್ಪಿಗಳು, ಶಿಕ್ಷಕರು, ರಂಗಭೂಮಿ ಕಲಾವಿದರು, ವೈದ್ಯರು, ಪರಿಸರ ಸಂರಕ್ಷಕರು, ರೈತರು ಮುಂತಾದ ಜನಾಮಟ್ಟದ ಸಾಧಕರಿಗೂ ಸ್ಥಾನ ನೀಡಲಾಗಿದೆ.
🎗
ರಾಜ್ಯೋತ್ಸವ ಪ್ರಶಸ್ತಿ – ಮಹತ್ವ:-ಈ ಪ್ರಶಸ್ತಿ:
✅ ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಗುರುತಿನ ಅಭಿವೃದ್ಧಿಗೆ ಕೊಡುಗೆ ನೀಡುವವರನ್ನು ಗೌರವಿಸುತ್ತದೆ
✅ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಾನ್ಯತೆ ನೀಡುತ್ತದೆ
✅ ಯುವ ಪೀಳಿಗೆಗೆ ಸ್ಪೂರ್ತಿ
2025ರ ರಾಜ್ಯೋತ್ಸವ ಪ್ರಶಸ್ತಿಗಳು:
* ಕಲೆ, ಸಂಸ್ಕೃತಿ, ಸಮಾಜ ಅಭಿವೃದ್ಧಿಯಲ್ಲಿ ತೊಡಗಿರುವ ಸಾಧಕರಿಗೆ ಪ್ರೋತ್ಸಾಹ ನೀಡಿವೆ.
* ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿಯನ್ನು ಹಿರಿಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಸಾಹಿತಿಗಳಾದ ಪ್ರೊ.ರಾಜೇಂದ್ರ ಚೆನ್ನಿ,ರಹಮತ ತರೀಕೆರೆ,ಸಂಗೀತ ಕಲಾವಿದ ದೇವೇಂದ್ರಕುಮಾರ ಪತ್ತಾರ,ಸೂಲಗಿತ್ತಿ ಈರಮ್ಮ,ನಟ ಪ್ರಕಾಶ ರಾಜ,ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಸೇರಿ 70 ಗಣ್ಯರಿಗೆ 70 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
* ಕನ್ನಡ ಮತ್ತು ಸಂಸ್ಕೃತ
ಸಚಿವ ಶಿವರಾಜ ತಂಗಡಗಿ
ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದರು.ಮಹನೀಯರಿಗೆ
ನವೆಂಬರ್ 1
ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಿದ್ದರಾಮಯ್ಯ
ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.
* ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಒಟ್ಟು 24 ವಿಭಾಗಳಲ್ಲಿ ಗಣ್ಯರಿಗೆ ನೀಡಿ ಅವರನ್ನು ಗೌರವಿಸಲಾಗಿದೆ.
Take Quiz
Loading...