* ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂತಿಮ ಅಂಕಿತ ಹಾಕಿದ್ದಾರೆ. ಹಲವು ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಸೂಚಿಸಿದ್ದಾರೆ.* ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಮೈಕ್ರೋ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಆದರೆ ರಾಜಭವನ ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿತ್ತು.* ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ನಿಯಂತ್ರಣ ಹೇರಲು ಮುಂದಾಗಿದ್ದು, ಮುಂದಿನ ಅಧಿವೇಶನದಲ್ಲಿ ಅದರ ಲಾಭ-ನಷ್ಟಗಳ ಬಗ್ಗೆ ಚರ್ಚಿಸಲು ನಿರ್ಧಾರಿಸಲಾಗಿದೆ.* ಈ ಸುಗ್ರೀವಾಜ್ಞೆಯಡಿ, ಅಪರಾಧಗಳಿಗೆ ಜಾಮೀನು ಲಭ್ಯವಿಲ್ಲ. ಶಿಕ್ಷೆಯು ಗರಿಷ್ಠ ಹತ್ತು ವರ್ಷ ಜೈಲು ಮತ್ತು ಐದು ಲಕ್ಷ ರೂ. ದಂಡವರೆಗೆ ವಿಸ್ತರಬಹುದು.* ಕರ್ನಾಟಕ ಸರ್ಕಾರ 2025ರ ಸುಗ್ರೀವಾಜ್ಞೆ ಮೂಲಕ ರೈತರು, ಮಹಿಳೆಯರು ಹಾಗೂ ಸ್ವಸಹಾಯ ಗುಂಪುಗಳನ್ನು ಮೈಕ್ರೋಫೈನಾನ್ಸ್ ಸಂಸ್ಥೆಗಳ ಅಧಿಕ ಬಡ್ಡಿದರಗಳು ಮತ್ತು ಬಲವಂತದ ವಸೂಲಾತಿಯಿಂದ ರಕ್ಷಿಸಲು ಕ್ರಮ ಕೈಗೊಂಡಿದೆ.* ಮೈಕ್ರೋಫೈನಾನ್ಸ್ ಕಂಪನಿಗಳು 30 ದಿನಗಳಲ್ಲಿ ನೋಂದಣಿ ಅರ್ಜಿ ಸಲ್ಲಿಸಿ, ಕಾರ್ಯಪ್ರದೇಶವನ್ನು ಸೂಚಿಸಬೇಕು.* ಸುಗ್ರೀವಾಜ್ಞೆ ಪ್ರಕಾರ, ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡದೇ ಯಾವುದೇ ಹಣಕಾಸು ಸಂಸ್ಥೆಗಳು ಸಾಲ ನೀಡಲು ಅಥವಾ ವಸೂಲಿ ಮಾಡಲು ಅನುಮತಿ ಇಲ್ಲ.* ಸರ್ಕಾರದ ಸುಗ್ರೀವಾಜ್ಞೆ ಪ್ರಕಾರ, ನೋಂದಣಿ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಅಥವಾ ದೂರಿನ ಆಧಾರದಲ್ಲಿ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು. ಸುಗ್ರೀವಾಜ್ಞೆ ಜಾರಿಗೆ ಮುನ್ನ ಪಡೆದ ಭದ್ರತಾ ಪತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಬಡ್ಡಿದರಗಳಲ್ಲಿ ಪಾರದರ್ಶಕತೆ ಕಡ್ಡಾಯವಾಗಿದ್ದು, MFI ಗಳಿಂದ ಬಲವಂತದ ವಸೂಲಿಗೆ ದಂಡ ವಿಧಿಸಬಹುದಾಗಿದೆ.* ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರ ಮೇಲೆ ಬಲವಂತದ ಕ್ರಮಗಳನ್ನು ಹೇರುವುದು, ಅಡ್ಡಿಪಡಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು, ಬೆದರಿಸುವುದು ಅಥವಾ ಸಾಲಗಾರರು, ಅವರ ಕುಟುಂಬ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು ಅಥವಾ ಅವರ ಒಡೆತನದ ಅಥವಾ ಬಳಸಿದ ಯಾವುದೇ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುವುದು ಎಂದು ವ್ಯಾಖ್ಯಾನಿಸಲಾಗಿದೆ.* ಸಾಲಗಾರರು ವಾಸಿಸುವ ಮನೆ ಅಥವಾ ಇತರ ಸ್ಥಳಗಳಿಗೆ ಆಗಾಗ್ಗೆ ಹೋಗುವುದು, ಹಣವನ್ನು ವಸೂಲಿ ಮಾಡಲು ಹೊರಗುತ್ತಿಗೆ ನೀಡುವುದು ಮತ್ತು ಸಾಲಗಾರರಿಂದ ಯಾವುದೇ ದಾಖಲೆಯನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸಹ ದಂಡದ ಕ್ರಮಕ್ಕೆ ಆಹ್ವಾನ ನೀಡುತ್ತದೆ.