* ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು 2,197 ಪುಟಗಳ ಎರಡು ಸಂಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.* ವರದಿ ಶಾಲಾ, ಉನ್ನತ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿದೆ.* ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆ ಬೋಧನೆಯನ್ನು ಕಡ್ಡಾಯಗೊಳಿಸಿ, ದ್ವಿಭಾಷಾ ನೀತಿ (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಅನುಷ್ಠಾನಗೊಳಿಸಬೇಕು.* 2+8+4 ಶಿಕ್ಷಣ ರಚನೆ, ವಲಸೆ ಮಕ್ಕಳಿಗೆ ವಸತಿ ಶಾಲೆಗಳು, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿಸುವುದು ಹಾಗೂ ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ನಿಯಂತ್ರಣ ಚೌಕಟ್ಟು ಶಿಫಾರಸು ಮಾಡಲಾಗಿದೆ.* ಆರ್ಟಿಇ ವ್ಯಾಪ್ತಿಯನ್ನು 4-18 ವಯಸ್ಸಿಗೆ ವಿಸ್ತರಿಸುವುದರ ಜೊತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರಿಯ ವಿದ್ಯಾಲಯ ಮಟ್ಟಕ್ಕೆ ಏರಿಸುವ ಸಲಹೆ ನೀಡಲಾಗಿದೆ.* ಹಾಲಿ ಬಜೆಟ್ನ ಶೇ.14ರ ಬದಲಿಗೆ ಶೇ.25-30 ಅನುದಾನವನ್ನು ಮರುಹಂಚಿಕೆ ಮಾಡಬೇಕು. ಜಿಎಸ್ಡಿಪಿಯ ಶೇ.4ರಷ್ಟು ಶಿಕ್ಷಣಕ್ಕೆ ಹಾಗೂ ಶೇ.1ರಷ್ಟು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು.* ಕನ್ನಡ/ಮಾತೃಭಾಷೆ ಮತ್ತು ಇನ್ನೊಂದು ಭಾಷೆ ಕಡ್ಡಾಯ, 5 ವರ್ಷಗಳ ಸಮಗ್ರ ಪದವಿ-ಸ್ನಾತಕೋತ್ತರ ಕೋರ್ಸ್ಗಳು, ಎಐ, ಆರೋಗ್ಯ, ಕೃಷಿ, ಕಾನೂನು ಕ್ಷೇತ್ರಗಳಲ್ಲಿ ಹೊಸ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪರಿಚಯಿಸುವ ಶಿಫಾರಸು ಮಾಡಲಾಗಿದೆ.* ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್ಗಳನ್ನು ಹೆಚ್ಚಿಸಿ, ಗ್ರಾಮೀಣ ಹಾಗೂ ಕೃಷಿ ಸಂಬಂಧಿತ ಅಲ್ಪಾವಧಿ ಕೋರ್ಸ್ಗಳಿಗೆ ಪ್ರೋತ್ಸಾಹ ನೀಡಬೇಕು.* ಸಾಮಾನ್ಯ ಪದವಿ ಕೋರ್ಸ್ಗಳಿಗೆ ಇಂಟರ್ನ್ಶಿಪ್ಗಾಗಿ ಸರ್ಕಾರದಿಂದ ನೆರವು, ಎಂಜಿನಿಯರಿಂಗ್ನಲ್ಲಿ ಉದ್ಯಮಶೀಲತೆ, ಸಂಶೋಧನೆ, ಹಸಿರು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವ ಸಲಹೆ ನೀಡಲಾಗಿದೆ.