* ಉತ್ತರ ಕನ್ನಡದ ಕೈಗಾ ಸ್ಥಾವರದ ಬಳಿಕ, ರಾಜ್ಯದಲ್ಲಿ ಎರಡನೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.* ಈ ಬಗ್ಗೆ ಎನ್ಟಿಪಿಸಿ ಸಂಸ್ಥೆಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.* ಎನ್ಟಿಪಿಸಿ ಈಗಾಗಲೇ ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೆಲ ಸ್ಥಳಗಳನ್ನು ಗುರುತಿಸಿದ್ದು, ಸ್ಥಳೀಯ ವಿರೋಧದ ನಡುವೆಯೂ ಇಡೀ ರಾಜ್ಯವನ್ನು ಪರಿಗಣಿಸಿ ಹೊಸ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದೆ.* ಸರ್ಕಾರ ಯಾವುದೇ ನಿರ್ದಿಷ್ಟ ಸ್ಥಳಗಳನ್ನು ಶಿಫಾರಸು ಮಾಡದೆ, ಯೋಗ್ಯ ಸ್ಥಳ ಗುರುತಿಸುವ ಹೊಣೆ ಎನ್ಟಿಪಿಸಿಗೆ ನೀಡಿದ್ದಾರೆ.* 2024ರ ನವೆಂಬರ್ 4ರಂದು ಎನ್ಟಿಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯು 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರ ನಿರ್ಮಾಣದ ಬಗ್ಗೆ ಇದೆ. ಇದಕ್ಕೆ 1,200 ಎಕರೆ ಭೂಮಿ ಅಗತ್ಯವಿದ್ದು, ಹೆಚ್ಚಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿನ ಜಮೀನು ಮತ್ತು ನೀರಿನ ಅವಶ್ಯಕತೆ ಇದೆ. ಹೆಚ್ಚುವರಿಯಾಗಿ, ವಸತಿ ವಸಾಹತು ಅಭಿವೃದ್ಧಿಗೆ ಸುಮಾರು 150 ಎಕರೆಗಳ ಅಗತ್ಯವಿದೆ.