* ಮಂಗಳೂರು ನಗರದಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.* ಪ್ರಸ್ತುತ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇಲ್ಲ. ಹಾಗಾಗಿ ನಿಖರ ಹವಾಮಾನ ಮುನ್ಸೂಚನೆ ನೀಡಲು ಗೋವಾ, ಹೈದರಾ ಬಾದ್, ಚೆನ್ನೈಯ ರಾಡಾರ್ಗಳನ್ನು ಕರ್ನಾಟಕ ಅವಲಂಬಿಸಿಕೊಂಡಿದೆ.* ಡಾಪ್ಲರ್ ರಾಡಾರ್ಗಳು ಖಚಿತವಾಗಿ ಹಾಗೂ ನಿಖರವಾಗಿ ಹವಾಮಾನ ಮುನ್ಸೂಚನೆ ನೀಡುವುದರಲ್ಲಿ ಮುಂಚೂಣಿಯಲ್ಲಿವೆ. ಕಡಲ್ಕೊರೆತಕ್ಕೆ ಸಂಬಂಧಿಸಿದ ಮಾಹಿತಿಯೂ ಇದರ ಮೂಲಕ ದೊರೆಯಲಿದೆ.* ಮಂಗಳೂರಿನ ಶಕ್ತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಈ ರಾಡಾರ್ 250ರಿಂದ 300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ಮೂಲಕ ಗರಿಷ್ಠ ಮಳೆಯಾಗುವ ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ, ಭಾಗಮಂಡಲದಂತಹ ಪ್ರದೇಶಗಳು ಈ ರಾಡಾರ್ನ ವ್ಯಾಪ್ತಿಗೆ ಬರಲಿವೆ.* ಬೆಂಗಳೂರಿನಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮೊದಲು ಸ್ಥಾಪಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಈಗ ಸ್ಥಳ ಬಹುತೇಕ ಅಂತಿಮವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.