* 2025–26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ.* ರಾಜ್ಯ ಪಠ್ಯಕ್ರಮ, CBSE ಮತ್ತು ICSE ಪಾಠ್ಯಕ್ರಮಗಳನ್ನು ಅನುಸರಿಸುವ ಸಹಶಿಕ್ಷಣ ಹೊಂದಿರುವ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕೆಂದು ಇಲಾಖೆಯ ಆಯುಕ್ತ ತ್ರಿಲೋಕ್ಚಂದ್ರ ತಿಳಿಸಿದ್ದಾರೆ.* ಈ ಮೀಸಲಾತಿಯಲ್ಲಿ ಸೀಟುಗಳು ತುಂಬದಿದ್ದರೆ ಉಳಿದ ಸೀಟುಗಳನ್ನು ಗಂಡುಮಕ್ಕಳಿಗೆ ನೀಡಬಹುದು.* ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿ ಅಥವಾ ಪೋಷಕರಿಗೆ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದು ಕಾನೂನುಬಾಹಿರವಾಗಿದೆ.* ಎಲ್ಲಾ ಶಾಲೆಗಳು ತಮ್ಮ ನಿಗದಿತ ಶುಲ್ಕವನ್ನು ಶಾಲೆಯ ನೋಟಿಸ್ ಬೋರ್ಡ್, ಜಾಲತಾಣ ಮತ್ತು ಎಸ್ಎಟಿಎಸ್ ತಂತ್ರಾಂಶದ ಮೂಲಕ ಬಹಿರಂಗಪಡಿಸಬೇಕು. ಈ ಮಾಹಿತಿಯನ್ನು ಶಾಲಾ ಮಾಹಿತಿ ಪುಸ್ತಕದಲ್ಲೂ ಮುದ್ರಿಸಬೇಕಾಗಿದೆ.* ಕ್ಯಾಪಿಟೇಷನ್ ಶುಲ್ಕ ವಸೂಲಿಗೆ ಅವಕಾಶವಿಲ್ಲ; ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು.* ಪ್ರವೇಶ ಪ್ರಕ್ರಿಯೆಯು ಮುಕ್ತ ಹಾಗೂ ಪಾರದರ್ಶಕವಾಗಿರಬೇಕು. ಪ್ರತಿ ಶಾಲೆ ತರಗತಿವಾರು ಪ್ರವೇಶದ ವೇಳಾಪಟ್ಟಿಯನ್ನು ಹಾಗೂ ಲಭ್ಯವಿರುವ ಸೀಟುಗಳ ವಿವರವನ್ನು ನಿಗದಿಪಡಿಸಿ ಪ್ರಕಟಿಸಬೇಕು. * ಈ ಪ್ರಕಟಣೆಯಲ್ಲಿ ಪ್ರವೇಶ ಶುಲ್ಕದ ಮಾಹಿತಿಯೂ ಇರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸುವುದು ಅವಶ್ಯಕವಾಗಿದೆ.