* ಕರ್ನಾಟಕದ ಐದು ರೈಲು ನಿಲ್ದಾಣಗಳು ಸೇರಿದಂತೆ ದೇಶಾದ್ಯಂತ 103 'ಅಮೃತ್ ನಿಲ್ದಾಣ'ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 22 ರಂದು (ಗುರುವಾರ) ರಾಜಸ್ಥಾನದ ಬಿಕಾನೇರ್ನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು.* ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 86 ಜಿಲ್ಲೆಗಳಲ್ಲಿರುವ ಈ ನಿಲ್ದಾಣಗಳನ್ನು ₹1,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.* ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಯ ಗೋಕಾಕ್ ರಸ್ತೆ ಮತ್ತು ಧಾರವಾಡ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣ ಯೋಜನೆ(ಎಬಿಎಸ್ಎಸ್) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ಐದು ನಿಲ್ದಾಣಗಳನ್ನು ಪ್ರಧಾನಿ ಮೋದಿ ಅವರು ಕಾರ್ಪಣೆಗೊಳಿಸಿದರು.* ಧಾರವಾಡ ರೈಲು ನಿಲ್ದಾಣವನ್ನು17.1 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗಿದೆ. ಪ್ರಮುಖ ಸುಧಾರಣೆಗಳಲ್ಲಿ ಹೊಸ 2ನೇ ಪ್ರವೇಶ ದ್ವಾರ, ಎಲ್ಲಾ ಪ್ಲಾಟ್ಫಾಮ್ರ್ಗಳನ್ನು ಸಂಪರ್ಕಿಸುವ 12 ಮೀ. ಅಗಲದ ಪಾದಚಾರಿ ಸೇತುವೆ ಮತ್ತು ಸುಲಭ ಪ್ರವೇಶಕ್ಕಾಗಿ 3 ಲಿಫ್ಟ್ಗಳು ಸೇರಿವೆ. ಪ್ಲಾಟ್ಫಾರ್ಮ್ 1ರಲ್ಲಿ 2 ಎಸ್ಕಲೇಟರ್ಗಳನ್ನು ಅಳವಡಿಸಲಾಗಿದೆ.* ಗದಗ ರೈಲು ನಿಲ್ದಾಣ : ₹23.24 ಕೋಟಿ ವೆಚ್ಚದಲ್ಲಿ ನವೀಕರಿಸಲಾದ ಗದಗ ರೈಲು ನಿಲ್ದಾಣವು ಉತ್ತರ ಕರ್ನಾಟಕದ ಪ್ರಮುಖ ಜಂಕ್ಷನ್ ಆಗಿದೆ. ಇದು ಕಲಾತ್ಮಕ ಪ್ರವೇಶದ್ವಾರ, ಪ್ರತ್ಯೇಕ ಪ್ರವೇಶ-ನಿರ್ಗಮನ ದ್ವಾರಗಳು, ಮೀಸಲಾದ ಪಾರ್ಕಿಂಗ್, 12 ಮೀಟರ್ ಅಗಲದ ಪಾದಚಾರಿ ಸೇತುವೆ, ಲಿಫ್ಟ್, ಎಸ್ಕಲೇಟರ್ಗಳು, ದಿವ್ಯಾಂಗ ಸ್ನೇಹಿ ಸೌಲಭ್ಯಗಳು, ಮತ್ತು ಆಧುನಿಕ ಸೂಚನಾ ಫಲ ಫಲಕಗಳನ್ನು ಹೊಂದಿದೆ. ಪ್ರತಿದಿನ 40ಕ್ಕೂ ಅಧಿಕ ರೈಲುಗಳು ನಿಲುಗಡೆಯಾಗುವ ಈ ನಿಲ್ದಾಣವು ಹುಬ್ಬಳ್ಳಿ, ಬೆಂಗಳೂರು, ಮುಂಬೈ, ಮತ್ತು ಹೈದರಾಬಾದ್ಗೆ ಸಂಪರ್ಕ ಕಲ್ಪಿಸುತ್ತದೆ.* ಧಾರವಾಡ ರೈಲು ನಿಲ್ದಾಣ : ₹17.1 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಧಾರವಾಡ ನಿಲ್ದಾಣವು ಎರಡನೇ ಪ್ರವೇಶದ್ವಾರ, 12 ಮೀಟರ್ ಅಗಲದ ಪಾದಚಾರಿ ಸೇತುವೆ, ಮೂರು ಲಿಫ್ಟ್ಗಳು, ಎಸ್ಕಲೇಟರ್ಗಳು, ಆಧುನಿಕ ಸೂಚನಾ ಫಲಕಗಳು, ಮತ್ತು ದಿವ್ಯಾಂಗ ಸ್ನೇಹಿ ಶೌಚಾಲಯಗಳನ್ನು ಒಳಗೊಂಡಿದೆ. ಈ ನಿಲ್ದಾಣವು ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಪುಣೆ, ಮತ್ತು ಗೋವಾಕ್ಕೆ ಸಂಪರ್ಕವನ್ನು ಒದಗಿಸುತ್ತದೆ.* ಮುನಿರಾಬಾದ್ ರೈಲು ನಿಲ್ದಾಣ : ₹18.40 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಈ ನಿಲ್ದಾಣವು ಹಂಪಿಯ ಯುನೆಸ್ಕೋ ವಿಶ್ವ ಪರಂಪರೆ ತಾಣಕ್ಕೆ ಹತ್ತಿರವಿದೆ. ಇದು ಆಧುನಿಕ ಕಟ್ಟಡ, ಪಾದಚಾರಿ ಸೇತುವೆ, ಲಿಫ್ಟ್ಗಳು, ಮತ್ತು ಸುಧಾರಿತ ಪ್ರಯಾಣಿಕರ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಕರ್ನಾಟಕವನ್ನು ಆಂಧ್ರಪ್ರದೇಶಕ್ಕೆ ಸಂಪರ್ಕಿಸುತ್ತದೆ.* ಬಾಗಲಕೋಟೆ ರೈಲು ನಿಲ್ದಾಣದ ವಿಶೇಷತೆಗಳು :- ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಸಾಮಾನ್ಯ ಟಿಕೆಟ್ ಕೊಳ್ಳುವಿಕೆಗಾಗಿ ಕನಿಷ್ಠ ಮೂರು ಮತ್ತು ಗರಿಷ್ಠ ಐದು ಕೌಂಟರ್ಗಳನ್ನು ತೆರೆಯಲಾಗಿದೆ. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.- ಮಹಿಳೆಯರು, ಪುರುಷರಿಗೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆ ಇದೆ. ವಿಶಾಲವಾದ ಕಾಯುವ ಕೊಠಡಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಸ್ಥಳೀಯ ಸಂಸ್ಕೃತಿ, ವಾಸ್ತುಶಿಲ್ಪವನ್ನು ರೈಲು ನಿಲ್ದಾಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಸೋಲಾರ್ ವಿದ್ಯುತ್ ಘಟಕ, ಜೊತೆಗೆ, ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನಿರ್ವಹಣಾ ಘಟಕ ಇದೆ. ಬಾಗಲಕೋಟೆ ರೈಲು ನಿಲ್ದಾಣ ಒಟ್ಟು 16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ.*ಗೋಕಾಕ್ ರಸ್ತೆ ರೈಲು ನಿಲ್ದಾಣ : ₹16.98 ಕೋಟಿಯಲ್ಲಿ ನವೀಕರಿಸಲಾದ ಈ ನಿಲ್ದಾಣವು ಹೊಸ G+1 ಕಟ್ಟಡ, ಪಾದಚಾರಿ ಸೇತುವೆ, ಲಿಫ್ಟ್ಗಳು, ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಇದು ಬೆಳಗಾವಿ, ಹುಬ್ಬಳ್ಳಿ, ಪುಣೆ, ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ.