Job Description: * ರಾಜ್ಯದ ಮಕ್ಕಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಮೇಲಿನ ಆಸಕ್ತಿಯ ಹಿನ್ನೆಲೆಯಲ್ಲಿ, ಸರ್ಕಾರವು 2025–26 ಶೈಕ್ಷಣಿಕ ವರ್ಷದಿಂದ ಇನ್ನೂ 208 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿದೆ.* ಈ ಹೊಸ ಕ್ರಮದಿಂದಾಗಿ, ಈಗಾಗಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸುತ್ತಿರುವ ಸರ್ಕಾರಿ ಶಾಲೆಗಳ ಪೈಕಿ ಇನ್ನಷ್ಟು ಶಾಲೆಗಳು ಈ ಪಟ್ಟಿಗೆ ಸೇರುತ್ತವೆ. ಈ ತರಗತಿಗಳು ಕನ್ನಡ ಮಾಧ್ಯಮದ ಜೊತೆಗೆ ದ್ವಿಭಾಷಾ ಮಾದರಿಯಲ್ಲಿ ಮುಂದುವರೆಯಲಿದ್ದು, ಮಕ್ಕಳು ಎರಡೂ ಭಾಷೆಗಳ ಬೋಧನೆಗೆ ಅವಕಾಶ ಹೊಂದಲಿದ್ದಾರೆ.* 2019ರಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಪ್ರಾಥಮಿಕ ಹಂತದಲ್ಲಿ 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿತ್ತು. ನಂತರ 2024ರಲ್ಲಿ ಈ ಸಂಖ್ಯೆ 1792ಕ್ಕೇರಿತು. ಇವುಗಳಲ್ಲಿ ಬಹುತೇಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಉತ್ತಮ ಪ್ರತಿಸ್ಪಂದನೆ ದೊರೆತಿದ್ದು, ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ, ರಾಜ್ಯದ ಶಿಕ್ಷಣ ಇಲಾಖೆಯು ಈ ಉತ್ಸಾಹದ ಬೆನ್ನಿಗೆ ನಿಂತು, ಇನ್ನೂ ಹೆಚ್ಚು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವುದು ಸಂತೋಷದ ವಿಚಾರವಾಗಿದೆ.* ಈ ಆದೇಶವು:- ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಭಾರವಿಲ್ಲ.- ಈ ಕ್ರಮವು 2019-20ರಿಂದ ಆರಂಭವಾದ ದ್ವಿಭಾಷಾ ಮಾಧ್ಯಮದ ಪ್ರಯೋಗದ ಮುಂದುವರಿಕೆಯಾಗಿದ್ದು, ಇದಕ್ಕೂ ಮುಂಚೆ 1419+373 ಶಾಲೆಗಳಲ್ಲಿ ಇದನ್ನು - ಅನುಷ್ಠಾನಗೊಳಿಸಲಾಗಿದೆ.ಈ ಕ್ರಮವು 2024-25ನೇ ಸಾಲಿನ ಬಜೆಟ್ ಘೋಷಣೆಯ ಭಾಗವಾಗಿದೆ.* ಸರ್ಕಾರದ ಹಿಂದಿನ ಆದೇಶ (ಇಡಿ 109 ಯೋಯೋಕ 2018, ದಿನಾಂಕ:18.05.2019) ದಲ್ಲಿನ ಷರತ್ತುಗಳಂತೆ ಈ ಹೊಸ ಅನುಮತಿಯನ್ನು ನೀಡಲಾಗಿದೆ. * ಈ ಆದೇಶವು:- ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಭಾರವಿಲ್ಲ.- ಈ ಕ್ರಮವು 2019-20ರಿಂದ ಆರಂಭವಾದ ದ್ವಿಭಾಷಾ ಮಾಧ್ಯಮದ ಪ್ರಯೋಗದ ಮುಂದುವರಿಕೆಯಾಗಿದ್ದು, ಇದಕ್ಕೂ ಮುಂಚೆ 1419+373 ಶಾಲೆಗಳಲ್ಲಿ ಇದನ್ನು - ಅನುಷ್ಠಾನಗೊಳಿಸಲಾಗಿದೆ.ಈ ಕ್ರಮವು 2024-25ನೇ ಸಾಲಿನ ಬಜೆಟ್ ಘೋಷಣೆಯ ಭಾಗವಾಗಿದೆ.* ಸರ್ಕಾರದ ಹಿಂದಿನ ಆದೇಶ (ಇಡಿ 109 ಯೋಯೋಕ 2018, ದಿನಾಂಕ:18.05.2019) ದಲ್ಲಿನ ಷರತ್ತುಗಳಂತೆ ಈ ಹೊಸ ಅನುಮತಿಯನ್ನು ನೀಡಲಾಗಿದೆ.