* ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 15 ರಾಜ್ಯಗಳು ಮತ್ತು 56 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ.* ಚುನಾವಣೆಯು ಫೆಬ್ರವರಿ 27 ರಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ ಗಂಟೆಯವರೆಗೆ ಮತದಾನ ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.* ಭಾರತದ ಸಂಸತ್ತು ದ್ವಿಸದನಗಳನ್ನು ಹೊಂದಿದೆ. ರಾಜ್ಯಸಭೆ ಮೇಲ್ಮನೆಯಾಗಿದ್ದರೆ, ಲೋಕಸಭೆ ಕೆಳಮನೆಯಾಗಿದೆ. ರಾಜ್ಯಸಭೆಯು ಗರಿಷ್ಠ 250 ಸದಸ್ಯರನ್ನು ಹೊಂದಬಹುದು. ಪ್ರಸ್ತುತ 245 ಸಂಸದರನ್ನು ಹೊಂದಿದೆ. ಈ ಪೈಕಿ ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಸದಸ್ಯರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ. ಕರೆಯಲಾಗುತ್ತದೆ. ಉಳಿದ ಸದಸ್ಯರನ್ನು ರಾಜ್ಯ ಶಾಸಕಾಂಗದ ಚುನಾಯಿತ ಸದಸ್ಯರು (ಶಾಸಕರು) ಆಯ್ಕೆ ಮಾಡುತ್ತಾರೆ. * ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವವರು ಭಾರತದ ಪ್ರಜೆಯಾಗಿರಬೇಕು, ಕನಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು, ಈ ಹಿಂದೆ ಅವರು ನ್ಯಾಯಾಂಗದಿಂದ ಶಿಕ್ಷೆಗೆ ಗುರಿಯಾಗಿರಬಾರದು, ಮತಿಭ್ರಮಣೆ ಇರಬಾರದು. ಇವೆಲ್ಲವುಗಳ ಜತೆಗೆ ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಹೊಂದಿರಬೇಕು. * ರಾಜ್ಯಸಭೆಯ ಸದಸ್ಯರ ಅಧಿಕಾರಾವಧಿ ಆರು ವರ್ಷ.