* 13 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸವನ್ನು ಬರೆದಿದ್ದಾರೆ.* ಆಸ್ಟ್ರೇಲಿಯದ ಅಂಡರ್-19 ತಂಡದ ವಿರುದ್ಧ ಯೂತ್ ಟೆಸ್ಟ್ನಲ್ಲಿ ಸೂರ್ಯವಂಶಿ ಶತಕ ಸಿಡಿಸಿದ್ದು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಇತಿಹಾಸ ಬರೆದಿದ್ದರು.* ಈ ಪಂದ್ಯದಲ್ಲಿ ವೈಭವ್ 62 ಎಸೆತಗಳಲ್ಲಿ 104 ರನ್ ಗಳಿಸಿದ್ದರು. ಕಳೆದ 16 ವರ್ಷಗಳ ಐಪಿಎಲ್ ಹರಾಜಿನ ಇತಿಹಾಸದಲ್ಲೇ ಹರಾಜಿಗೆ ಹೆಸರು ನೋಂದಾಯಿಸಿದ ಅತಿ ಕಿರಿಯ ಆಟಗಾರ ಎಂದು ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದರು.* ಬಿಹಾರದ ಸಣ್ಣ ಹಳ್ಳಿಯಿಂದ ಬಂದಿರುವ ಸೂರ್ಯವಂಶಿ ಅವರನ್ನು ಜೆಡ್ಡಾದ ಅಬಾದಿ ಅಲ್ ಜೋಹರ್ ಅರೆನಾದಲ್ಲಿ ಐಪಿಎಲ್ ಮೆಗಾ ಹರಾಜಿನ 2ನೇ ದಿನದಂದು ರಾಜಸ್ಥಾನ ರಾಯಲ್ಸ್ INR 1.10 ಕೋಟಿಗೆ ಆಯ್ಕೆಮಾಡಿತು.* ಇದೀಗ ಸೂರ್ಯವಂಶಿ ಕೇವಲ 13ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಹರಾಜಾದ ಅತಿ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ ಇದೀಗ ಬಿಹಾರ ಮೂಲದ ವೈಭವ್ ಪಾಲಾಗಿದೆ.* ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರ ಪರವಾಗಿ ಆಡಿದ್ದ ವೈಭವ್ ಸೂರ್ಯವಂಶಿ ಐದು ಪಂದ್ಯಗಳಿಂದ ಸುಮಾರು 400 ರನ್ ಕಲೆ ಹಾಕಿದ್ದರು.