* ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 22ರಂದು ರಾಜಸ್ಥಾನದ ಬಿಕಾನೇರಿನಲ್ಲಿ 26 ಸಾವಿರ ಕೋಟಿ ರೂ. ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.* ರೈಲು, ರಸ್ತೆ, ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಈ ಯೋಜನೆಗಳು ಸಹಾಯಕವಾಗಲಿವೆ.* ಅವರು 18 ರಾಜ್ಯಗಳ 86 ಜಿಲ್ಲೆಗಳಲ್ಲಿನ 103 ಅಮೃತ ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಬಿಕಾನೇರ್-ಮುಂಬೈ ಎಕ್ಸ್ಪ್ರೆಸ್ ರೈಲನ್ನು ಹಸಿರು ನಿಶಾನೆ ಹಾರಿಸುತ್ತಾರೆ.* ಚೂರು-ಸದುಲ್ಪುರ್ ರೈಲು ಮಾರ್ಗದ ಭೂಮಿಪೂಜೆ ಮತ್ತು ವಿವಿಧ ರೈಲು ಮಾರ್ಗಗಳ ವಿದ್ಯುತ್ಕರಣವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.* ಮೂರು ವಾಹನ ಅಂಡರ್ಪಾಸ್ಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಬಲವರ್ಧನೆ ಸೇರಿದಂತೆ ಏಳು ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.* ಈ ಯೋಜನೆಗಳು ಇಂಡೋ-ಪಾಕ್ ಗಡಿವರೆಗೆ ಸಂಪರ್ಕ ಕಲ್ಪಿಸುತ್ತವೆ.* ಬಿಕಾನೇರ್ ಮತ್ತು ನವಾ (ದಿದ್ವಾನಾ ಕುಚಾಮನ್) ನಲ್ಲಿ ಸೌರಶಕ್ತಿ ಯೋಜನೆಗಳ ಭೂಮಿಪೂಜೆ ಮತ್ತು ಉದ್ಘಾಟನೆ ಮಾಡುವ ಮೂಲಕ ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜಿಸಲಿದ್ದಾರೆ.* 25 ರಾಜ್ಯ ಸರ್ಕಾರದ ಯೋಜನೆಗಳನ್ನು ಉದ್ಘಾಟಿಸಿ ಭೂಮಿಪೂಜೆ ಮಾಡಲಿದ್ದಾರೆ. 750 ಕಿ.ಮೀ. ಉದ್ದದ 12 ರಾಜ್ಯ ಹೆದ್ದಾರಿಗಳ ನವೀಕರಣ, ವಿದ್ಯುತ್ ಯೋಜನೆಗಳು, ಆರೋಗ್ಯ ಹಾಗೂ ನೀರು ಯೋಜನೆಗಳು ಸೇರಿವೆ.* ರಾಜಸಮಾನ್ದ್, ಪ್ರತಾಪಗಢ, ಭಿಲ್ವಾರ ಮತ್ತು ಧೋಲ್ಪುರ್ನಲ್ಲಿ ನರ್ಸಿಂಗ್ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ.* ಜುಂಜುನು ಜಿಲ್ಲೆಯಲ್ಲಿನ ಗ್ರಾಮೀಣ ನೀರು ಪೂರೈಕೆ ಮತ್ತು ಫ್ಲೋರೆಸಿಸ್ ನಿವಾರಣಾ ಯೋಜನೆ ಹಾಗೂ ಪಾಲಿ ಜಿಲ್ಲೆಯ 7 ಪಟ್ಟಣಗಳಲ್ಲಿ AMRUT 2.0 ಅಡಿಯಲ್ಲಿ ನಗರ ನೀರು ಯೋಜನೆ ಪುನ್ರರಚನೆಗೂ ಭೂಮಿಪೂಜೆ ಮಾಡಲಿದ್ದಾರೆ.