* ಕರ್ನಾಟಕ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ‘ರಾಗಿ ಹೆಲ್ತ್ ಮಿಕ್ಸ್’ ಪುಡಿ ಮಿಶ್ರಿತ ಬಿಸಿ ಹಾಲು ನೀಡುವ ಯೋಜನೆಯನ್ನು ವಾರದಲ್ಲಿ 3 ದಿನದಿಂದ 5 ದಿನಗಳಿಗೆ ವಿಸ್ತರಿಸಲು ಆದೇಶಿಸಿದೆ.* ಇತ್ತೀಚಿನ ಸಚಿವ ಸಂಪುಟ ಸಭೆಯ ನಿರ್ಧಾರದಂತೆ, ಪ್ರಸ್ತುತ ಸಾಲಿನ ಬಜೆಟ್ ಘೋಷಣೆಯ ಪ್ರಕಾರ, ಮಕ್ಕಳಿಗೆ ವಾರದಲ್ಲಿ 5 ದಿನ ಕ್ಷೀರಭಾಗ್ಯ ಹಾಲು ಹಾಗೂ 5 ದಿನ ರಾಗಿ ಹೆಲ್ತ್ ಮಿಕ್ಸ್ ಪುಡಿ ನೀಡಲಾಗುವುದು.* ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಈಗಾಗಲೇ ವಾರದಲ್ಲಿ 3 ದಿನ ಈ ಸೇವೆ ನೀಡುತ್ತಿದ್ದು, ಮುಂದಿನಿಂದ 5 ದಿನ ವಿತರಿಸಲು ಒಪ್ಪಂದಕ್ಕೆ ಅವಕಾಶ ನೀಡಲಾಗಿದೆ.* ಯೋಜನೆಗೆ ಒಟ್ಟು 100 ಕೋಟಿ ರೂ. ವೆಚ್ಚವಾಗಲಿದ್ದು, ಅದರ 25%ವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.* ಪ್ರತಿ ಕೆಜಿ ರಾಗಿ ಮಿಕ್ಸ್ಗೆ 182.50 ರೂ. ದರ ನಿಗದಿ ಮಾಡಲಾಗಿದ್ದು, ಪ್ರತಿ ಮಕ್ಕಳಿಗೆ 150 ಎಂ.ಎಲ್. ಹಾಲಿನಲ್ಲಿ 5 ಗ್ರಾಂ ಪುಡಿ ಮಿಶ್ರಣ ಮಾಡಿ ನೀಡಬೇಕು ಎಂದು ಆದೇಶಿಸಲಾಗಿದೆ.