Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ತಮಿಳು ಕವಿ ವೈರಮುತ್ತು ಅವರಿಗೆ 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆ
Authored by:
Akshata Halli
Date:
16 ಮಾರ್ಚ್ 2026
➤
ಭಾರತೀಯ ಸಾಹಿತ್ಯ ಲೋಕದ ಅತ್ಯುನ್ನತ ಗೌರವವಾದ
ಜ್ಞಾನಪೀಠ ಪ್ರಶಸ್ತಿ
ಗೆ 2025ನೇ ಸಾಲಿನಲ್ಲಿ ಖ್ಯಾತ ತಮಿಳು ಕವಿ, ಗೀತರಚನೆಕಾರ ಮತ್ತು ಕಾದಂಬರಿಕಾರ
ಆರ್. ವೈರಮುತ್ತು
ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಗೌರವಕ್ಕೆ ಪಾತ್ರರಾದ ತಮಿಳುನಾಡಿನ ಮೂರನೇ ಸಾಹಿತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮಾರ್ಚ್ 2026ರಲ್ಲಿ ಭಾರತೀಯ ಜ್ಞಾನಪೀಠ ಆಯ್ಕೆ ಸಮಿತಿಯು ಈ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.
➤
ವೈರಮುತ್ತು: ಸಾಹಿತ್ಯದ ಪಯಣ:
1953ರ ಜುಲೈ 13ರಂದು ತಮಿಳುನಾಡಿನಲ್ಲಿ ಜನಿಸಿದ ವೈರಮುತ್ತು ಅವರು ಕಳೆದ ನಾಲ್ಕು ದಶಕಗಳಿಂದ ತಮಿಳು ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
- ಪ್ರಮುಖ ಕೃತಿಗಳು:
'ಕಳ್ಳಿಕಾಟ್ಟು ಇತಿಹಾಸಂ' (Kallikattu Ithikasam), 'ಕರುವಚ್ಚಿ ಕಾವ್ಯಂ', 'ತಣ್ಣೀರ್ ದೇಶಂ' ಮತ್ತು 'ಮೂನ್ರಾಮ್ ಉಳಗಪೋರ್'.
- ಸಿನಿಮಾ ಸಾಹಿತ್ಯ:
7,500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿರುವ ಇವರು, ಅತ್ಯುತ್ತಮ ಗೀತರಚನೆಗಾಗಿ ದಾಖಲೆಯ 7 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
- ಗೌರವಗಳು:
ಭಾರತ ಸರ್ಕಾರವು ಇವರಿಗೆ 2003ರಲ್ಲಿ ಪದ್ಮಶ್ರೀ ಮತ್ತು 2014ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿದೆ. 2003ರಲ್ಲಿ 'ಕಳ್ಳಿಕಾಟ್ಟು ಇತಿಹಾಸಂ' ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
➤
ಜ್ಞಾನಪೀಠ ಪ್ರಶಸ್ತಿ ಪಡೆದ ತಮಿಳು ಸಾಹಿತಿಗಳು:
ತಮಿಳು ಸಾಹಿತ್ಯದ ಇತಿಹಾಸದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:
- ಪಿ.ವಿ. ಅಖಿಲನ್ (1975):
ಪ್ರಶಸ್ತಿ ಪಡೆದ ಮೊದಲ ತಮಿಳು ಸಾಹಿತಿ.
- ಡಿ. ಜಯಕಾಂತನ್ (2002):
ಎರಡನೇ ಸಾಹಿತಿ.
- ಆರ್. ವೈರಮುತ್ತು (2025):
ಪ್ರಸ್ತುತ ಪ್ರಶಸ್ತಿ ವಿಜೇತರು.
➤
ಭಾರತೀಯ ಸಾಹಿತ್ಯದ ಅತ್ಯುನ್ನತ ಗೌರವವಾದ
ಜ್ಞಾನಪೀಠ ಪ್ರಶಸ್ತಿ
ಯನ್ನು 1961ರಲ್ಲಿ ಸಾಹು ಜೈನ್ ಕುಟುಂಬದ 'ಭಾರತೀಯ ಜ್ಞಾನಪೀಠ' ಟ್ರಸ್ಟ್ ಸ್ಥಾಪಿಸಿತು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳು ಹಾಗೂ ಇಂಗ್ಲಿಷ್ನಲ್ಲಿ ಸಾಹಿತ್ಯ ಕೃಷಿ ಮಾಡುವ ಭಾರತೀಯರಿಗೆ ನೀಡಲಾಗುವ ಈ ಪ್ರಶಸ್ತಿಯು ₹11 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ವಾಗ್ವೇದಿಯ ಕಂಚಿನ ವಿಗ್ರಹವನ್ನು ಒಳಗೊಂಡಿರುತ್ತದೆ. 1965ರಲ್ಲಿ ಮಲಯಾಳಂ ಕವಿ ಜಿ. ಶಂಕರ ಕುರುಪ್ ಅವರು ಈ ಗೌರವಕ್ಕೆ ಪಾತ್ರರಾದ ಮೊದಲ ಸಾಹಿತಿಯಾಗಿದ್ದಾರೆ.
➤
ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಒಟ್ಟು
8 ಪ್ರಶಸ್ತಿಗಳು
ಕನ್ನಡಕ್ಕೆ ಸಂದಿವೆ.
1.ಕುವೆಂಪು (ಕೆ.ವಿ. ಪುಟ್ಟಪ್ಪ):1967
2.ದ.ರಾ. ಬೇಂದ್ರೆ: 1973
3.ಶಿವರಾಮ ಕಾರಂತ: 1977
4.ಮಾಸ್ತಿ ವೆಂಕಟೇಶ ಅಯ್ಯಂಗಾರ್: 1983
5.ವಿ.ಕೃ. ಗೋಕಾಕ: 1990
6.ಯು.ಆರ್. ಅನಂತಮೂರ್ತಿ: 1994
7.ಗಿರೀಶ್ ಕಾರ್ನಾಡ್: 1998
8.ಚಂದ್ರಶೇಖರ ಕಂಬಾರ: 2010
Take Quiz
Loading...