* ಲಂಡನ್ ಮೂಲದ ಕ್ವಾಕೆರಲಿ ಸೈಮಂಡ್ಸ್ (ಕ್ಯೂಎಸ್) ಬಿಡುಗಡೆಗೊಳಿಸಿದ 2026ರ ರ್ಯಾಂಕಿಂಗ್ ಪಟ್ಟಿಯಲ್ಲಿ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯು ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಐಐಟಿ ದೆಹಲಿಯು 70 ಸ್ಥಾನಗಳಷ್ಟು ಮೇಲಕ್ಕೇರಿದೆ.* ನೂರಕ್ಕೂ ಹೆಚ್ಚು ದೇಶಗಳಿಂದ 1,500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿದ್ದು, ಅಮೆರಿಕದ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತನ್ನ ಅಗ್ರಸ್ಥಾನ ಉಳಿಸಿಕೊಂಡಿದೆ. ಭಾರತದಲ್ಲಿ ಐಐಟಿ ದೆಹಲಿ (IIT Delhi) ಅಗ್ರಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ಅನೇಕ ಭಾರತೀಯ ಯೂನಿರ್ಸಿಟಿಗಳು ಮೊದಲ ಬಾರಿಗೆ ಸ್ಥಾನ ಪಡೆದಿವೆ. ಈ ಕ್ಯುಎಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಬರೋಬ್ಬರಿ 54 ಭಾರತೀಯ ಶಿಕ್ಷಣ ಸಂಸ್ಥೆಗಳಿವೆ.* ಐಐಟಿ ದೆಹಲಿ ಎರಡು ವರ್ಷಗಳ ಹಿಂದೆ ಹತ್ತಿರ ಹತ್ತಿರ 200ನೇ ಸ್ಥಾನದ ಸಮೀಪದಲ್ಲಿತ್ತು. ಎರಡು ವರ್ಷದಲ್ಲಿ 70ಕ್ಕೂ ಹೆಚ್ಚು ಸ್ಥಾನ ಮೇಲೇರಿದೆ. 2024-25ರ ಪಟ್ಟಿಯಲ್ಲಿ ಐಐಟಿ ದೆಹಲಿ 150ನೇ ಸ್ಥಾನದಲ್ಲಿತ್ತು. ಈಗ 2025-26ರ ಪಟ್ಟಿಯಲ್ಲಿ 123ನೇ ಸ್ಥಾನಕ್ಕೇರಿದೆ.* ಭಾರತೀಯ ಯೂನಿವರ್ಸಿಟಿಗಳ ಪೈಕಿ ಐಐಟಿ ದೆಹಲಿ ನಂತರದ ಸ್ಥಾನ ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್ನದ್ದಾಗಿದೆ. ಅವು ಕ್ರಮವಾಗಿ 129 ಮತ್ತು 180ನೇ ರ್ಯಾಂಕಿಂಗ್ ಹೊಂದಿವೆ. ಕಳೆದ ಬಾರಿಯ ಪಟ್ಟಿಯಲ್ಲಿ ಐಐಟಿ ಬಾಂಬೆ ಭಾರತೀಯ ಯೂನಿವರ್ಸಿಟಿಗಳಲ್ಲಿ ನಂಬರ್ ಒನ್ ಎನಿಸಿತ್ತು.* ಕ್ಯೂಎಸ್ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ಯವಿದ್ಯಾಲಯಗಳ 2026ನೇ ಸಾಲಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಭಾರತದ 8 ಸಂಸ್ಥೆಗಳು ಹೊಸದಾಗಿ ಸೇರ್ಪಡೆಯಾಗಿವೆ. * ಭಾರತದ 54 ಯೂನಿವರ್ಸಿಟಿಗಳು ಈ 2026ರ ಕ್ಯುಎಸ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇವೆ. ಅತಿಹೆಚ್ಚು ಯೂನಿವರ್ಸಿಟಿಗಳನ್ನು ಪಟ್ಟಿಯಲ್ಲಿ ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲು ಬರುತ್ತದೆ. ಅಲ್ಲಿಯ 192 ಶಿಕ್ಷಣ ಸಂಸ್ಥೆಗಳು ಇದರಲ್ಲಿವೆ. ಬ್ರಿಟನ್ನ 90, ಚೀನಾದ 72 ಯೂನಿವರ್ಸಿಟಿಗಳಿವೆ. ನಾಲ್ಕನೇ ಸ್ಥಾನ ಭಾರತದ್ದಾಗಿದೆ. ಪಾಕಿಸ್ತಾನದ 13 ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿ ಇರಬಹುದು.* ವಿಶ್ವದ ಟಾಪ್-10 ಶಿಕ್ಷಣ ಸಂಸ್ಥೆಗಳು :1. ಎಂಐಟಿ, ಅಮೆರಿಕ2. ಲಂಡನ್ ಇಂಪೀರಿಯಲ್ ಕಾಲೇಜ್, ಬ್ರಿಟನ್3. ಸ್ಟಾನ್ಫೋರ್ಡ್ ಯೂನಿವರ್ಸಿಟಿ, ಅಮೆರಿಕ4. ಆಕ್ಸ್ಫರ್ಡ್ ಯೂನಿವರ್ಸಿಟಿ, ಇಂಗ್ಲೆಂಡ್5. ಹಾರ್ವರ್ಡ್ ಯೂನಿವರ್ಸಿಟಿ, ಅಮೆರಿಕ6. ಕೇಂಬ್ರಿಡ್ಜ್ ಯೂನಿವರ್ಸಿಟಿ, ಇಂಗ್ಲೆಂಡ್7. ಇಟಿಎಚ್ ಜುರಿಚ್, ಸ್ವಿಟ್ಜರ್ಲ್ಯಾಂಡ್8. ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್9. ಯುನಿವರ್ಸಿಟಿ ಕಾಲೇಜ್ ಲಂಡನ್, ಇಂಗ್ಲೆಂಡ್10. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೆರಿಕ* ಭಾರತದ ಟಾಪ್-10 ಶಿಕ್ಷಣ ಸಂಸ್ಥೆಗಳು : 1. ಐಐಟಿ ಡೆಲ್ಲಿ (123ನೇ ಸ್ಥಾನ)2. ಐಐಟಿ ಬಾಂಬೆ (129ನೇ ಸ್ಥಾನ)3. ಐಐಟಿ ಮದ್ರಾಸ್ (180ನೇ ಸ್ಥಾನ)4. ಐಐಟಿ ಖರಗ್ಪುರ್ (215ನೇ ಸ್ಥಾನ)5. ಐಐಎಸ್ಸಿ ಬೆಂಗಳೂರು (219ನೇ ಸ್ಥಾನ)6. ಐಐಟಿ ಕಾನಪುರ್ (222ನೇ ಸ್ಥಾನ)7. ಡೆಲ್ಲಿ ಯೂನಿವರ್ಸಿಟಿ (328ನೇ ಸ್ಥಾನ)8. ಐಐಟಿ ಗುವಾಹತಿ (334ನೇ ಸ್ಥಾನ)9. ಐಐಟಿ ರೂರ್ಕೀ (339ನೇ ಸ್ಥಾನ)10. ಅಣ್ಣಾ ಯೂನಿವರ್ಸಿಟಿ (465ನೇ ಸ್ಥಾನ)