* ಪ್ರಸ್ತುತ ನಡೆಯುತ್ತಿರುವ 2024 ಪ್ಯಾರಿಸ್‌ ಒಲಿಂಪಿಂಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಶೂಟಿಂಗ್ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತದ ಮನು ಭಾಕರ್‌ ಮತ್ತು ಸರಬ್ಜೋತ್ ಸಿಂಗ್‌ ಜೋಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿದೆ. * ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್‌ ಅವರು ಏಕೈಕ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದು ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದಕ್ಕೂ ಮುನ್ನ ಇವರು 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.* ಜುಲೈ 30 ರಂದು (ಮಂಗಳವಾರ) ನಡೆದಿದ್ದ ಕಂಚಿನ ಪದಕದ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ವಿರುದ್ಧ ಭಾರತದ ಮನು ಭಾಕರ್‌ ಹಾಗೂ ಸರಬ್ಜೋತ್‌ ಸಿಂಗ್‌ ಜೋಡಿ 16-10 ಅಂತರದಲ್ಲಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಮನು ಭಾಕರ್‌ ಅವರು ಭಾರತದ ಪರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿಶೇಷ ದಾಖಲೆಯನ್ನು ಬರೆದರು. * ಏಕೈಕ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲಿಟ್‌ ಎಂಬ ದಾಖಲೆಯನ್ನು ಮನು ಭಾಕರ್‌ ಬರೆದಿದ್ದಾರೆ. ಇದು ಇವರ ಮೊಟ್ಟ ಮೊದಲ ಒಲಿಂಪಿಕ್ಸ್‌ ಪದಕವಾಗಿತ್ತು. ಇದೀಗ ಅವರು ಎರಡನೇ ಪದಕವನ್ನು ಗೆದ್ದಿದ್ದಾರೆ.