* 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬಿಲ್ಲುಗಾರ ಹರ್ವಿಂದರ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಓಟಗಾರ್ತಿ ಪ್ರೀತಿ ಪಾಲ್ ಅವರು ಭಾನುವಾರ (ಸೆಪ್ಟೆಂಬರ್ 8) ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತ ದೇಶದ ಧ್ವಜಧಾರಿಗಳಾಗಿದ್ದಾರೆ* ಮಾತನಾಡಿರುವ ಹರ್ವಿಂದರ್ ಸಿಂಗ್ "ಭಾರತಕ್ಕೆ ಬಂಗಾರದ ಚಿನ್ನದ ಪದಕ ಗೆದ್ದಿರುವ ನನ್ನ ಕನಸು ನನಸಾಗಿದೆ. ಇದೀಗ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿರುವುದು ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರ ಗೆಲುವು ಇದಾಗಿದೆ. ಇದು ಕನಸುಗಳನ್ನು ಈಡೇರಿಸಲು ಎಲ್ಲರಿಗೂ ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದ್ದಾರೆ.* ಪ್ರೀತಿ ಪಾಲ್ ಕೂಡ ಪ್ಯಾರಾಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಧ್ವಜಧಾರಿಯಾಗಿ ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಗೌರವವಾಗಿದೆ. ಈ ಕ್ಷಣ ನನಗಷ್ಟೇ ಅಲ್ಲ, ಇದು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಶಕ್ತಿಮೀರಿ ಪ್ರಯತ್ನಿಸಿರುವ ಪ್ರತಿಯೊಬ್ಬ ಅಥ್ಲೀಟ್ ಗಳ ಕ್ಷಣವಾಗಿದೆ. ಸಮಾರೋಪ ಸಮಾರಂಭದಲ್ಲಿ ನಮ್ಮ ಅದ್ಭುತ ತಂಡವನ್ನು ಮುನ್ನಡೆಸಲು ನಾನು ರೋಮಾಂಚನಗೊಂಡಿದ್ದೇನೆ ಅಥ್ಲೀಟ್ ಪ್ರೀತಿ ತಿಳಿಸಿದ್ದಾರೆ.* ಮಹಿಳೆಯರ ಟಿ35 100 ಹಾಗೂ 200 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿರುವ ಪ್ರೀತಿ ಪಾಲ್ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಛಲವೊಂದು ಇದ್ದರೆ ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ.