* ಪ್ಯಾಲೆಸ್ಟೀನ್‌ ಪ್ರಧಾನಿ ಮೊಹಮ್ಮದ್‌ ಶ್ತಾಯಿಹ್‌ ಅವರು ಫೆಬ್ರುವರಿ 26 ರಂದು (ಸೋಮವಾರ) ರಾಜೀನಾಮೆ ನೀಡಿದ್ದಾರೆ.* 'ಇಸ್ರೇಲ್ ಅಕ್ರಮಣದಿಂದ ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಯನ್ನು ಉಲ್ಲೇಖಿಸಿದ ಯುದ್ಧ ಪೀಡಿತ ಪ್ರದೇಶದಲ್ಲಿ ರಾಜಕೀಯ ಒಮ್ಮತ ರೂಪಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು 'ಪ್ಯಾಲೇಸ್ಸಿನಿಯನ್ ಪ್ರಾಧಿಕಾರ'ದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರಿಗೆ ಸಲ್ಲಿಸಿದ ರಾಜೀನಾಮೆಯಲ್ಲಿ ತಿಳಿಸಿದ್ದಾರೆ.* ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ನ ಆಕ್ರಮಣ ಹಾಗೂ ಪಶ್ಚಿಮ ದಂಡೆ ಮತ್ತು ಜೆರುಸಲೇಮ್‌ ನಲ್ಲಿ ಪರಿಸ್ಥಿತಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಗೆ ಸರಕಾರದ ರಾಜೀನಾಮೆಯನ್ನು ಸಲ್ಲಿಸುವುದಾಗಿ ಮುಹಮ್ಮದ್ ಶ್ತಾಯಿಹ್ ಅವರು ತಿಳಿಸಿದರು.