* ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (POWERGRID) ಮಾನವ ಸಂಪನ್ಮೂಲ ನಿರ್ವಹಣೆಗಾಗಿ ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿಯನ್ನು ಗಳಿಸಿದೆ.* ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.* ಪವರ್ಗ್ರಿಡ್ ಸಿಎಂಡಿ ರವೀಂದ್ರ ಕುಮಾರ್ ತ್ಯಾಗಿ ಮತ್ತು ನಿರ್ದೇಶಕ (ಸಿಬ್ಬಂದಿ) ಡಾ. ಯತೀಂದ್ರ ದ್ವಿವೇದಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. * ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಡಿಪಿಇ ಕಾರ್ಯದರ್ಶಿ ಕೆ. ಮೋಸೆಸ್ ಚಲೈ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.* ಈ ಮಾನ್ಯತೆಯು POWERGRID ನ ಪ್ರಗತಿಪರ ಮತ್ತು ಉದ್ಯೋಗಿ-ಕೇಂದ್ರಿತ ಮಾನವ ಸಂಪನ್ಮೂಲ ನೀತಿಗಳನ್ನು ಒತ್ತಿ ತೋರಿಸುತ್ತದೆ. ನಿರಂತರ ಕೌಶಲ್ಯಾಭಿವೃದ್ಧಿ, ನಾಯಕತ್ವ ತರಬೇತಿ, ಸೇರ್ಪಡೆ ಮತ್ತು ಸಮಗ್ರ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದ ಆದ್ಯತೆಯ ಪರಿಣಾಮವಾಗಿ ಸಂಸ್ಥೆಗೆ ಈ ಪ್ರಶಸ್ತಿದೊರೆತಿದೆ.* ಜುಲೈ ಹೊತ್ತಿಗೆ, POWERGRID ದೇಶದಾದ್ಯಂತ 286 ಉಪಕೇಂದ್ರಗಳು, 1,80,849 ಕಿ.ಮೀ. ಪ್ರಸರಣ ಮಾರ್ಗಗಳು ಮತ್ತು 5,74,331 ಎಂವಿಎ ರೂಪಾಂತರ ಸಾಮರ್ಥ್ಯವನ್ನು ನಿರ್ವಹಿಸುತ್ತಿದೆ.* ಡಿಜಿಟಲ್ ಪರಿಹಾರಗಳ ಸಹಾಯದಿಂದ ಸಂಸ್ಥೆ ಪ್ರಸರಣ ವ್ಯವಸ್ಥೆಯ ಲಭ್ಯತೆಯನ್ನು ಶೇ.99.85ಕ್ಕಿಂತ ಹೆಚ್ಚು ಮಟ್ಟದಲ್ಲಿ ಕಾಯ್ದುಕೊಂಡಿದೆ.