* 2024ರಲ್ಲಿ ಭಾರತವು ಪವನ ಮತ್ತು ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಲ್ಲಿಇದೀಗ ಜರ್ಮನಿಯನ್ನು ಮೀರಿಸಿ, ವಿಶ್ವದಲ್ಲಿ 3ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.* ಮಂಗಳವಾರ(ಏಪ್ರಿಲ್ 8) ಬಿಡುಗಡೆಗೊಂಡ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂನ ಆರನೇ ಆವೃತ್ತಿಯ ವರದಿ ಪ್ರಕಾರ, ಕಳೆದ ವರ್ಷ ಜಾಗತಿಕ ವಿದ್ಯುತ್ ಉತ್ಪಾದನೆಯ ಶೇಕಡಾ 15 ರಷ್ಟು ಪವನ ಮತ್ತು ಸೌರ ಶಕ್ತಿಯಿಂದ ಬಂದಿದೆ, ಇದರಲ್ಲಿ ಭಾರತದ ಪಾಲು ಶೇಕಡಾ 10 ಆಗಿದೆ.* ನವೀಕರಿಸಬಹುದಾದ ಇಂಧನ ಹಾಗೂ ಪರಮಾಣು ಶಕ್ತಿಯಂತಹ ಕಡಿಮೆ ಇಂಗಾಲದ ಮೂಲಗಳಿಂದ 2024ರಲ್ಲಿ ಜಾಗತಿಕ ವಿದ್ಯುತ್ ಉತ್ಪಾದನೆಯ ಶೇಕಡಾ 40.9ರಷ್ಟು ಬಂದಿದೆ. * ಇದು 1940ರ ದಶಕದ ನಂತರ ಕಂಡ ಮೊದಲ ಬಾರಿಗೆ ಈ ಮಟ್ಟದ ಸಾಧನೆ ಎಂದು ವರದಿ ವಿವರಿಸಿದೆ.* ಭಾರತದಲ್ಲಿ, ಶುದ್ಧ ಮೂಲಗಳು ವಿದ್ಯುತ್ ಉತ್ಪಾದನೆಯಲ್ಲಿ ಶೇ. 22 ರಷ್ಟಿವೆ. ಜಲವಿದ್ಯುತ್ ಉತ್ಪಾದನೆಯು ಶೇ. 8 ರಷ್ಟು ಹೆಚ್ಚಿನ ಕೊಡುಗೆ ನೀಡಿದರೆ, ಪವನ ಮತ್ತು ಸೌರಶಕ್ತಿ ಒಟ್ಟಾಗಿ ಶೇ. 10 ರಷ್ಟಿದೆ.