* ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾವಾದಿ ಅಸ್ಸಾಂನ ಪೂರ್ಣಿಮಾ ದೇವಿ ಬರ್ಮನ್ ಅವರು ಟೈಮ್ಸ್ ಮ್ಯಾಗಜೀನ್ನ 2025ನೇ ಸಾಲಿನ ವರ್ಷದ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದಾರೆ.* ಟೈಮ್ಸ್ ನಿಯತಕಾಲಿಕವು ಸುಸ್ಥಿರ ಜಗತ್ತಿಗೆ ಶ್ರಮಿಸುವ ಅಸಾಧಾರಣ ನಾಯಕರನ್ನು ಗೌರವಿಸುತ್ತದೆ. ಪೂರ್ಣಿಮಾ ದೇವಿ ಬರ್ಮನ್ ಈ ವರ್ಷದ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ.* Greater adjutant stork (ಸ್ಥಳೀಯವಾಗಿ ಹರ್ಗಿಲಾ ಎಂದು ಕರೆಯಲಾಗುತ್ತದೆ) ಅನ್ನು ಸಂರಕ್ಷಿಸುವಲ್ಲಿ ಬರ್ಮನ್ ಅವರ ಪ್ರಯತ್ನಗಳು ಪರಿಸರ ಮತ್ತು ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ.* 45 ವರ್ಷದ ಬರ್ಮನ್ ಅವರು ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಕೊಕ್ಕರೆಗಳಲ್ಲಿ ಒಂದನ್ನು ಉಳಿಸುವಲ್ಲಿ ಸಂರಕ್ಷಣಾಕಾರರಾಗಿ ಮಾಡಿದ ಕೆಲಸಕ್ಕಾಗಿ ಅವರನ್ನು ಗುರುತಿಸಲಾಗಿದೆ.* ಅವರ ಸಂರಕ್ಷಣಾ ಕಾರ್ಯವು ಭಾರತ, ಕಾಂಬೋಡಿಯಾ ಅದರಾಚೆಗೂ ವಿಸ್ತರಿಸಿವೆ. ವಿಶ್ವಸಂಸ್ಥೆಯ 2007ರಿಂದ ಹರ್ಗಿಲಾ ರಕ್ಷಣೆಗೆ ನಿಂತರು. ಅಸ್ಸಾಂನಲ್ಲಿ 2007ರಲ್ಲಿ 450 ಇದ್ದ ಹರ್ಗಿಲಾ ಸಂಖ್ಯೆಯು 2023ರಲ್ಲಿ 1800ಕ್ಕೆ ಏರಿಕೆಯಾಗಿದೆ.* ಹರ್ಗಿಲಾ ಸೈನ್ಯ: 20 ಸಾವಿರಕ್ಕೂ ಹೆಚ್ಚು ಮಹಿಳೆಯರ ಜಾಲ ರಚಿಸಿ, ಹರ್ಗಿಲಾಗಳ ಸಂರಕ್ಷಣೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮುದಾಯ ಸಹಭಾಗಿತ್ವದೊಂದಿಗೆ ಮಹಿಳಾ ಸಬಲೀಕರಣಗೊಳಿಸಲಾಗುತ್ತದೆ.* ಈ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ, ಬರ್ಮನ್ ಅವರು 2017 ರಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಭಾರತೀಯ ಮಹಿಳೆಯರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ನಾರಿ ಶಕ್ತಿ ಪುರಸ್ಕಾರ'ವನ್ನು ಪಡೆದರು. ಅದೇ ವರ್ಷ, ಯುನೈಟೆಡ್ ಕಿಂಗ್ಡಂನ ರಾಜಕುಮಾರಿ ರಾಯಲ್ ಆನ್ ಅವರು ನೀಡುವ ಗ್ರೀನ್ ಆಸ್ಕರ್ ಎಂದು ಕರೆಯಲ್ಪಡುವ ವಿಟ್ಲಿ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಯಿತು.* ಪೂರ್ಣಿಮಾ ದೇವಿ ಬರ್ಮನ್ ಅಸ್ಸಾಂನ ಕಾಮರೂಪದಿಂದ ಬಂದವರಾಗಿದ್ದು, ಗೌಹಾಟಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ಹಾಗೂ ವನ್ಯಜೀವಿ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.* 2007 ರಲ್ಲಿ ಪಿಎಚ್ಡಿಗಾಗಿ ಸಂಶೋಧನೆ ನಡೆಸುತ್ತಿದ್ದಾಗ, ಬಾರ್ಮನ್ ಅಸ್ಸಾಂನಲ್ಲಿ ದೊಡ್ಡ ಅಡ್ಜಟಂಟ್ ಕೊಕ್ಕರೆಗಳ ಗೂಡು ಹೊಂದಿದ್ದ ಮರವನ್ನು ಕಡಿಯುವ ಬಗ್ಗೆ ಕರೆ ಸ್ವೀಕರಿಸಿದರು. ಈ ಘಟನೆ ಅವರ ಜೀವನ ಬದಲಿಸಿದ ಕ್ಷಣವಾಗಿತ್ತು.* ಬರ್ಮಾನ್ ಅವರು ಆರಣ್ಯಕ್ನಲ್ಲಿ ಹಿರಿಯ ವನ್ಯಜೀವಿ ಜೀವಶಾಸ್ತ್ರಜ್ಞರಾಗಿದ್ದು, ಗ್ರೇಟರ್ ಅಡ್ಜಟಂಟ್ ಸಂರಕ್ಷಣಾ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಅವರು WiNN ಇಂಡಿಯಾದ ನಿರ್ದೇಶಕಿ ಮತ್ತು IUCN ಸ್ಪೆಷಲಿಸ್ಟ್ ಗ್ರೂಪ್ ಸದಸ್ಯೆಯಾಗಿದ್ದಾರೆ.