* ಚೇತೇಶ್ವರ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 2005ರಲ್ಲಿ ಸೌರಾಷ್ಟ್ರ ಪರ ಪ್ರಥಮ ದರ್ಜೆ ಕ್ರಿಕೆಟ್ ಆರಂಭಿಸಿ, 20 ವರ್ಷಗಳ ದೀರ್ಘಾವಧಿಯ ವೃತ್ತಿಜೀವನ ನಡೆಸಿದರು.* 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮೂಲಕ ಅಂತರರಾಷ್ಟ್ರೀಯ ಪ್ರವೇಶ ಪಡೆದ ಪೂಜಾರ, 2013ರಲ್ಲಿ ಝಿಂಬಾಬ್ವೆ ವಿರುದ್ಧ ಏಕದಿನ ಆರಂಭಿಸಿದರು.* ಏಕದಿನಗಳಲ್ಲಿ ಹೆಚ್ಚು ಅವಕಾಶ ಸಿಗದಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ನಂಬಿಗಸ್ತ ಆಟಗಾರರಾದರು. ಜೂನ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯಟೆಸ್ಟ್ ಆಡಿದರು.* ಪೂಜಾರ 278 ಪ್ರಥಮ ದರ್ಜೆ ಪಂದ್ಯಗಳಲ್ಲಿ 21301 ರನ್ (66 ಶತಕ), 130 ಲಿಸ್ಟ್-ಎ ಪಂದ್ಯಗಳಲ್ಲಿ 5759 ರನ್ (16 ಶತಕ) ಹಾಗೂ 71 ಟಿ20 ಪಂದ್ಯಗಳಲ್ಲಿ 1556 ರನ್ ಗಳಿಸಿದ್ದಾರೆ.* ಟೀಮ್ ಇಂಡಿಯಾ ಪರ 103 ಟೆಸ್ಟ್ ಹಾಗೂ 5 ಏಕದಿನಗಳಲ್ಲಿ 7200+ ರನ್ ಬಾರಿಸಿ, ಟೆಸ್ಟ್ ಕ್ರಿಕೆಟ್ನಲ್ಲಿ 19 ಶತಕ ದಾಖಲಿಸಿದ್ದಾರೆ.* ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದ ಪೂಜಾರ, ಭಾರತೀಯ ಜೆರ್ಸಿ ಧರಿಸುವುದು ಹಾಗೂ ರಾಷ್ಟ್ರಗೀತೆ ಹಾಡುವುದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳೆಂದು ತಿಳಿಸಿದ್ದಾರೆ.* “ಪ್ರತಿ ಒಳ್ಳೆಯ ಸಂಗತಿಯೂ ಕೊನೆಗೊಳ್ಳುತ್ತದೆ, ಅದೇ ರೀತಿ ನನ್ನ ಕ್ರಿಕೆಟ್ ಜೀವನಕ್ಕೂ ತೆರೆಬಿದ್ದಿದೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.