* ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ, ಭಾರತೀಯ ಅಂಚೆ ಇಲಾಖೆಯೊಂದಿಗೆ ಸೇರಿ ವಿಶೇಷ ಅಂಚೆ ಚೀಟಿಯನ್ನು ಬುಧವಾರ(ಆಗಸ್ಟ್ 13) ಬಿಡುಗಡೆ ಮಾಡಿದೆ. ಈ ಚೀಟಿ ‘ಮೈ ಸ್ಟ್ಯಾಂಪ್’ ಯೋಜನೆಯಡಿ ಬಂದಿದೆ.* 1975ರಲ್ಲಿ ಸ್ಥಾಪನೆಯಾದ ಪುರವಂಕರ ಕಂಪನಿಯ ಪಯಣವನ್ನು ಚಿತ್ರಿಸುವ ಈ ಚೀಟಿಯಲ್ಲಿ ನೀಲಿ ಬಣ್ಣ ಕಠಿಣ ಶ್ರಮದ ಸಂಕೇತವಾಗಿದ್ದು, “ದಿ ಆರ್ಟ್ ಆಫ್ ಡೆವಲಪ್ಮೆಂಟ್” ಶೀರ್ಷಿಕೆ ಸೃಜನಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿಯ ದಕ್ಷಿಣ ವಲಯದ ಸಿಇಒ ಮಲ್ಲಣ್ಣ ಸಾಸಲು ಹೇಳಿದರು.* ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಅಂಚೆ ಚೀಟಿಗಳು ಕಲೆ, ಇತಿಹಾಸ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ.* ‘ಮೈ ಸ್ಟ್ಯಾಂಪ್’ ಯೋಜನೆ ಕಂಪನಿಗಳ ದೇಶ ನಿರ್ಮಾಣದ ಕೊಡುಗೆಯನ್ನು ಸ್ಮರಿಸುತ್ತದೆ ಎಂದರು.