* ಪಶ್ಚಿಮ ಘಟ್ಟದ ಕೊಳವೊಂದರಲ್ಲಿ ಈಚೆಗೆ ಅಪರೂಪದ ‘ಅಣಬೆ ಕಪ್ಪೆ’ಯೊಂದು ಅಧ್ಯಯನ ತಂಡವೊಂದರ ಕಣ್ಣಿಗೆ ಬಿದ್ದಿದೆ.* ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಕೊಳವೊಂದರಲ್ಲಿ ಕಂಡು ಬಂದ ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಯ ಪಕ್ಕೆಯ ಮೇಲೆ ಪುಟ್ಟದಾದ ಅಣಬೆ ಮೊಳಕೆಯೊಡೆದಿದೆ. ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ. * ಕೊಳೆತ ವಸ್ತು, ಮಣ್ಣು, ಮರದ ಮೇಲೆ ಮಾತ್ರ ಬೆಳೆಯುವ ಅಣಬೆಯು ಜೀವಂತ ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಶಿಲೀಂಧ್ರ (ಫಂಗೈ) ವರ್ಗಕ್ಕೆ ಸೇರಿದ ಅಣಬೆಯನ್ನು 'ಮೈಸಿನ್' ಅಥವಾ 'ಬಾನೆಟ್ ಮಕ್ರೂಮ್' ಎಂದು ಕರೆಯುತ್ತಾರೆ.* ಕಪ್ಪೆಯಂತಹ ಉಭಯವಾಸಿಗಳು ಶಿಲೀಂಧ್ರ (ಫಂಗೈ) ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುವುದು ಸಹಜವಾಗಿದೆ.* ಮಾಳ ಗ್ರಾಮದ ಕೊಳದಲ್ಲಿ 40ಕ್ಕೂ ಹೆಚ್ಚು 'ಗೋಲ್ಡನ್ ಬ್ಯಾಕ್ಸ್' ಕಪ್ಪೆಗಳಿವೆ. ಅದರಲ್ಲಿ ಒಂದು ಕಪ್ಪೆಯ ಮೇಲೆ ಮಾತ್ರ ಅಣಬೆ ಬೆಳೆದಿದೆ ಎಂದು ಹಿರಿಯ ಯೋಜನಾಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಧಕ ವೈ.ಟಿ.ಲೋಹಿತ್ ' ಅವರು ತಿಳಿಸಿದರು.