* ಕೋವಿಡ್ ನಂತರದ ಅವಧಿಯಲ್ಲಿ ಜಾಗತಿಕ ಪ್ರವಾಸೋದ್ಯಮ ವಲಯವು ಚೇತರಿಸಿಕೊಂಡಿದ್ದು, ಭಾರತ 2023ರ ವೇಳೆಗೆ ಎಂಟನೇ ಸ್ಥಾನದಲ್ಲಿದೆ ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿ (WTTC) ತಿಳಿಸಿದೆ.* 2023ರಲ್ಲಿ ಪ್ರವಾಸೋದ್ಯಮ ವಲಯವು ಜಾಗತಿಕ ಆರ್ಥಿಕತೆಗೆ 10.9 ಟ್ರಿಲಿಯನ್ ಡಾಲರ್ಗಳಷ್ಟು ಕೊಡುಗೆ ನೀಡಿದ್ದು, 2034ರ ವೇಳೆಗೆ ಇದು 16 ಟ್ರಿಲಿಯನ್ ಡಾಲರ್ಗಳಿಗೆ ಏರಲಿದೆ.* ಈ ಸಮಯದಲ್ಲಿ ಜಾಗತಿಕ ಜಿಡಿಪಿಯಲ್ಲಿ ಈ ವಲಯದ ಪಾಲು ಶೇ.11ಕ್ಕೂ ಹೆಚ್ಚು ಆಗಲಿದೆ.* ಅಮೆರಿಕ 2.36 ಟ್ರಿಲಿಯನ್ ಡಾಲರ್ಗಳ ಪ್ರವಾಸೋದ್ಯಮ ಆರ್ಥಿಕತೆಯಿಂದ ಮೊದಲ ಸ್ಥಾನದಲ್ಲಿದ್ದು, ನಂತರ ಚೀನಾ, ಜರ್ಮನಿ, ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಮೆಕ್ಸಿಕೋ ಮತ್ತು ಭಾರತ ಇದೆ.* WTTC ವರದಿ ಪ್ರಕಾರ, ಮುಂದಿನ ದಶಕದಲ್ಲಿ ಭಾರತ ಜಾಗತಿಕ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳಲಿದೆ.