* ಅಜೀಂ ಪ್ರೇಮ್ಜಿ ಫೌಂಡೇಷನ್ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ “ದೀಪಿಕಾ ವಿದ್ಯಾರ್ಥಿ ವೇತನ” ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಫೌಂಡೇಷನ್ ₹2,000 ಕೋಟಿ ಮತ್ತು ರಾಜ್ಯ ಸರ್ಕಾರ ₹200 ಕೋಟಿ ನೀಡಿವೆ.* ಈ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 10ನೇ ಹಾಗೂ ದ್ವಿತೀಯ ಪಿಯು ಪೂರೈಸಿ 2025–26ರಲ್ಲಿ ಪದವಿ ಅಥವಾ ವೃತ್ತಿ ಶಿಕ್ಷಣಕ್ಕೆ ಸೇರುವ 37,000 ಹೆಣ್ಣುಮಕ್ಕಳಿಗೆ ಪ್ರತಿವರ್ಷ ₹30,000 ವಿದ್ಯಾರ್ಥಿವೇತನ ಸಿಗಲಿದೆ.* ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದರೆ ರಾಜ್ಯವೇ ಹೆಚ್ಚುವರಿ ಮೊತ್ತ ಭರಿಸಲಿದೆ. ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.* ಇದರ ಮೂಲಕ ಬಾಲ್ಯ ವಿವಾಹ, ಬಾಲ ಗರ್ಭಿಣಿ ಸಮಸ್ಯೆ, ಬಾಲ ಕಾರ್ಮಿಕತೆ ಮುಂತಾದ ಸವಾಲುಗಳನ್ನು ಎದುರಿಸಲು ಶಕ್ತಿ ಸಿಗಲಿದೆ ಎಂದು ಅವರು ತಿಳಿಸಿದರು.