Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ 2026ರ 'ಪದ್ಮಪಾಣಿ ಪ್ರಶಸ್ತಿ' ಘೋಷಣೆ
Authored by:
Akshata Halli
Date:
20 ಜನವರಿ 2026
➤
ಭಾರತೀಯ ಚಿತ್ರರಂಗದ ದಂತಕಥೆ ಹಾಗೂ 'ಇಸೈಜ್ಞಾನಿ' ಎಂದೇ ಖ್ಯಾತರಾದ ಮಾಂತ್ರಿಕ ಸಂಗೀತ ನಿರ್ದೇಶಕ
ಇಳಯರಾಜಾ
ಅವರನ್ನು 11ನೇ ಆವೃತ್ತಿಯ
ಅಜಂತಾ-ಎಲ್ಲೋರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (AIFF)
ಪ್ರತಿಷ್ಠಿತ 'ಪದ್ಮಪಾಣಿ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ. 2 ಲಕ್ಷ ರೂಪಾಯಿ ನಗದು, ಪದ್ಮಪಾಣಿ ಸ್ಮರಣಿಕೆ ಮತ್ತು ಗೌರವ ಪ್ರಶಸ್ತಿ ಪತ್ರವನ್ನೊಳಗೊಂಡ ಈ
ಪ್ರತಿಷ್ಠಿತ 'ಪದ್ಮಪಾಣಿ ಪ್ರಶಸ್ತಿ'ಯನ್ನು, ಜನವರಿ 28, 2026
ರಂದು ಚತ್ರಪತಿ ಸಂಭಾಜಿನಗರದ MGM ಕ್ಯಾಂಪಸ್ನಲ್ಲಿರುವ ರುಕ್ಮಿಣಿ ಸಭಾಂಗಣದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ
ಇಳಯರಾಜಾ
ಅವರಿಗೆ ನೀಡಿ ಗೌರವಿಸಲಾಗುವುದು.
➤
ಆಯ್ಕೆ ಸಮಿತಿ:
ಖ್ಯಾತ ಚಲನಚಿತ್ರ ವಿಮರ್ಶಕಿ ಲತಿಕಾ ಪದ್ಗಾಂವ್ಕರ್ ನೇತೃತ್ವದ ಸಮಿತಿಯು ಇಳಯರಾಜಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಈ ಸಮಿತಿಯಲ್ಲಿ ನಿರ್ದೇಶಕ ಅಶುತೋಷ್ ಗೋವಾರಿಕರ್, ಸುನಿಲ್ ಸುಕ್ತಂಕರ್ ಮತ್ತು ಚಂದ್ರಕಾಂತ್ ಕುಲಕರ್ಣಿ ಸದಸ್ಯರಾಗಿದ್ದರು.
ಚಲನಚಿತ್ರೋತ್ಸವದ ಅವಧಿ:
11ನೇ ಅಜಂತಾ-ಎಲ್ಲೋರಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವವು
ಜನವರಿ 28 ರಿಂದ ಫೆಬ್ರವರಿ 1, 2026
ರವರೆಗೆ ನಡೆಯಲಿದೆ.
➤
ಇಳಯರಾಜಾ ಅವರ ಸಾಧನೆ:
ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಅವರು 1,500 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಮತ್ತು 7,000 ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಇವರ ಕೊಡುಗೆ ಅಪಾರ. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಸಂಗೀತವನ್ನು ಪಾಶ್ಚಿಮಾತ್ಯ ಸಿಂಫನಿಗಳೊಂದಿಗೆ ಸುಂದರವಾಗಿ ಸಮ್ಮಿಲನಗೊಳಿಸುವಲ್ಲಿ ಅವರು ಸಿದ್ಧಹಸ್ತರು.
➤
ಈ ಚಲನಚಿತ್ರೋತ್ಸವವನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಮಹಾರಾಷ್ಟ್ರ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಹಾಗೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (NFDC) ಸಹಯೋಗದೊಂದಿಗೆ ಆಯೋಜಿಸಲಾಗಿದೆ.
➤
ಇಳಯರಾಜಾ ಅವರು ಈ ಹಿಂದೆ ಭಾರತ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ'ಕ್ಕೂ ಭಾಜನರಾಗಿದ್ದಾರೆ.
Take Quiz
Loading...