Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ
6 ನವೆಂಬರ್ 2025
* ಮಂಗಳೂರು ವಿಶ್ವವಿದ್ಯಾನಿಲಯ (Mangalore University - MU) ಮತ್ತು ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ (Yenepoya (Deemed to be University)) ಸಂಶೋಧಕರು ಈ ಮಹತ್ವದ ಅಧ್ಯಯನವನ್ನು ನಡೆಸಿದ್ದಾರೆ.
* ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ
ರಣಜಿತ್ ದಾಸ್
, ಮಂಗಳೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.
M. S. ಮುಸ್ತಾಕ್
ಹಾಗೂ ಸಂಶೋಧಕ
ಜೈಸನ್ ಜೀವನ್ ಸಿಕ್ವೇರಾ
ಅವರ ನೇತೃತ್ವದಲ್ಲಿ ನಡೆಸಿದ ಜೀನೋಮಿಕ್ ಮಾದರಿ ಅಧ್ಯಯನದಲ್ಲಿ ಈ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಶೋಧನಾ ತಂಡದ ಸಮಗ್ರ ಅಧ್ಯಯನವು ಜೀವಶಾಸ್ತ್ರ ಕ್ಷೇತ್ರಕ್ಕೆ ಹೊಸ ವೈಜ್ಞಾನಿಕ ಅರಿವು ತಂದಿದೆ.
* ಭಾರತೀಯ ಉಪಖಂಡದ ಆಧುನಿಕ ಜನಸಂಖ್ಯೆಗೆ ಮೂಲ ಕಾರಣವಾದ ಹಿಂದೆ ಗುರುತಿಸಲಾದ ಮೂರು ಆನುವಂಶಿಕ ಮೂಲಗಳ ಜೊತೆಗೆ, ಒಂದು ವಿಶಿಷ್ಟವಾದ
ನಾಲ್ಕನೇ ಆನುವಂಶಿಕ ಮೂಲ ವಂಶ
ವನ್ನು (Fourth Ancestral Component) ಸಂಶೋಧಕರು ಪತ್ತೆಹಚ್ಚಿದ್ದಾರೆ.
* ಈ ಹಿಂದಿನ ಅಧ್ಯಯನಗಳು ಸಾಮಾನ್ಯವಾಗಿ ಭಾರತೀಯರಿಗೆ ಮೂರು ಪ್ರಮುಖ ಮೂಲಗಳನ್ನು ಸೂಚಿಸಿದ್ದವು:
1.ಇರಾನಿನ ಪ್ರಸ್ಥಭೂಮಿಯ ಕೃಷಿಕರ ವಂಶ (Iranian Plateau farmer-related)
2.ಪಾಂಟಿಕ್-ಕ್ಯಾಸ್ಪಿಯನ್ ಸ್ಟೆಪ್ಪೆ ಪಶುಪಾಲಕರ ವಂಶ (Pontic-Caspian Steppe pastoralist-related)
3.ಅಂಡಮಾನೀಸ್ ಬೇಟೆಗಾರ-ಸಂಗ್ರಾಹಕರ ವಂಶ (Andamanese hunter-gatherer-related)
* ಈ ಹೊಸ 'ಪ್ರೊಟೊ ದ್ರಾವಿಡಿಯನ್' ಆನುವಂಶಿಕ ಗುರುತನ್ನು ಮುಖ್ಯವಾಗಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ
ಕೊರಗ ಬುಡಕಟ್ಟು ಸಮುದಾಯದ
ಆನುವಂಶಿಕ (ಜೀನೋಮ್) ಅಧ್ಯಯನದ ಆಧಾರದ ಮೇಲೆ ಗುರುತಿಸಲಾಗಿದೆ.
* ಈ ಹೊಸ ಆನುವಂಶಿಕ ಮೂಲವು ಸುಮಾರು
4,400 ವರ್ಷಗಳ ಹಿಂದೆ
,
ಸಿಂಧೂ ಕಣಿವೆ ನಾಗರಿಕತೆಯ
ಉದಯದ ಸಮಯದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
* ಈ ವಂಶವು ಇರಾನಿನ ಪ್ರಸ್ಥಭೂಮಿ ಮತ್ತು ಸಿಂಧೂ ಕಣಿವೆಯ ನಡುವಿನ ಪ್ರದೇಶದಲ್ಲಿ ಹುಟ್ಟಿಕೊಂಡಿರಬಹುದು ಮತ್ತು ಇದು ಭಾರತದಲ್ಲಿ
ಇಂಡೋ-ಯೂರೋಪಿಯನ್ ಭಾಷೆಗಳು
ಹರಡುವ ಮೊದಲು ಅಸ್ತಿತ್ವದಲ್ಲಿದ್ದ
ದ್ರಾವಿಡ ಭಾಷಾ ಹೃದಯಭಾಗಕ್ಕೆ
(Dravidian heartland) ಬೆಂಬಲ ನೀಡುತ್ತದೆ.
* ಈ ಅದ್ಭುತ ಸಂಶೋಧನೆಯ ವಿವರಗಳು
ಯುರೋಪಿಯನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್ (European Journal of Human Genetics - EJHG)
ಎಂಬ ಪ್ರತಿಷ್ಠಿತ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.
ಈ ಅಧ್ಯಯನವು ಭಾರತದ ಪ್ರಾಚೀನ ಮಾನವ ವಲಸೆ ಮತ್ತು ಜನಸಂಖ್ಯಾ ಇತಿಹಾಸದ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತದೆ.
Take Quiz
Loading...