Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
🌎 ಪರಿಸರ ಸುಸ್ಥಿರತೆಯತ್ತ ವಿಶ್ವದ ಹೊಸ ಹೆಜ್ಜೆ
20 ಅಕ್ಟೋಬರ್ 2025
* ವಿಶ್ವದಾದ್ಯಂತ ಜಾಗತಿಕ ಅರಣ್ಯ ನಾಶದ ಪ್ರಮಾಣವು ಹೆಚ್ಚಾಗುತ್ತಿದ್ದು,1990 ರಿಂದ 2015 ರ ಅವಧಿಯಲ್ಲಿ ವಿಶ್ವದ ಶೇ.3 ರಷ್ಟು ಅರಣ್ಯ ಪ್ರದೇಶ ನಾಶವಾಗಿದೆ.ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದ್ದು,ಇದು ಹವಾಮಾನ ಬದಲಾವಣೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
* ಅರಣ್ಯ ನಾಶದಿಂದ ಪರಿಸರ ಸಮತೋಲನ ಹಾಳಾಗುತ್ತಿದು,ಮಾನವ ಜೀವನ ಮತ್ತು ಹವಾಮಾನ ಬದಲಾವಣೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ ಎಂದು ಇತ್ತೀಚಿಗೆ ಬಿಡುಗಡೆಯಾದ "ಫಾರೆಸ್ಟ ಡಿಕ್ಲ್ ರೇಷನ್ ಅಸೆಸ್ಮೆಂಟ್ "ವರದಿ ಎಚ್ಚರಿಸಿದೆ.
ಮುಖ್ಯ ಕಾರಣಗಳು :
* ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು
* ಅಭಿವೃದ್ಧಿ ಯೋಜನೆಗಳು
* ಜನಸಂಖ್ಯಾ ಬೆಳವಣಿಗೆ
* ಇಂಧನ ಮತ್ತು ಮರದ ಬಳಕೆ
ಪರಿಣಾಮಗಳು :
* ಹವಾಮಾನ ಬದಲಾವಣೆ
* ಜೀವವೈವಿಧ್ಯತೆಯ ನಷ್ಟ
* ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ
* ಅರಣ್ಯ ಸಂರಕ್ಷಣಾ ಕ್ರಮಗಳು :
* ಸುಸ್ಥಿರ ಅರಣ್ಯ ನಿರ್ವಹಣೆ
* ಅಂತರರಾಷ್ಟ್ರಿಯ ಸಹಕಾರ
* ಅರಣ್ಯ ಕರಣ
* ಅರಣ್ಯ ಮತ್ತು ಪರಿಸರ ಹಾನಿ ಸರಿಪಡಿಸಲು ಸಿಓಪಿ -26 ರ ವೇಳೆ ರಾಷ್ಟ್ರಗಳು ಶೇ.30 ರಷ್ಟು ಹಾಳಾದ ಪ್ರದೇಶಗಳನ್ನು ಪುನರ ಸ್ಥಾಪನೆ ಮಾಡುವ ಗುರಿ ಇಟ್ಟಿದ್ದವು.ಆದರೆ ಪ್ರಸ್ತುತ ಕೇವಲ 10 .6 ಮಿಲಿಯನ್ ಹೆಕ್ಟರ ಪ್ರದೇಶದಲ್ಲಿ ಮಾತ್ರ ಪುನರ ಸ್ಥಾಪನೆಗೆ ಕೆಲಸ ನಡೆಯುತ್ತಿದೆ ಎಂದು ವರದಿ ಹೇಳಿದೆ.
* ಭಾರತ ಸರಕಾರ ತಿದ್ದುಪಡಿ ಮಡಿದ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಆದರೆ,ಈ ನಿಯಮಗಳು ಅರಣ್ಯ ಅವಲಂಬಿತ ಸಮುದಾಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ವರದಿ ತಿಳಿಸಿದೆ.
* 2021 ರಲ್ಲಿ ಗ್ಲಾಸ್ಗೋ ದಲ್ಲಿ ನಡೆದ ಸಿಓಪಿ-26 ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳು 2030 ರೊಳಗೆ ಅರಣ್ಯ ನಾಶ ಮತ್ತು ಅರಣ್ಯ ಹಾನಿಯನ್ನು ಸಂಪೂರ್ಣ ನಿಲ್ಲಿಸುವುದಾಗಿ ಘೋಷಿಸಿದ್ದವು.
* ಕಳೆದ ವರ್ಷ 8 .1 ಮಿಲಿಯನ್ ಹೆಕ್ಟರ ಅರಣ್ಯ ನಾಶವಾಗಿದ್ದು,ಅದರಲ್ಲೂ,6 .73 ಮಿಲಿಯನ್ ಹೆಕ್ಟರ ಉಷ್ಣವಲಯ ಅರಣ್ಯ ವಲಯಗಳು ನಾಶವಾಗಿವೆ.
* 2024 - 25 ರಲ್ಲಿ ಭಾರತದಲ್ಲಿ ಸುಮಾರು 1 .5 ಕೋಟಿ ಜನರು ಕಾಡ್ಗಿಚ್ಚಿನ ಅಪಾಯಕ್ಕೆ ಸಿಲಿಕ್ಕಿದ್ದರು.ಉತ್ತರ ಪ್ರದೇಶವು ದಾಖಲೆಯ ಕಾಡ್ಗಿಚ್ಚಿಗೆ ಒಳಗಾಗಿದೆ.
* ಅರಣ್ಯ ನಾಶದಿಂದ ಜೀವವೈವಿಧ್ಯತೆ ಸಂಕುಲನ ನಾಶಕ್ಕೆ ಕಾರಣವಾಗುತ್ತದೆ.( ಕಾಡು ಉಳಿಸಿ ನಾಡು ಬೆಳೆಸಿ ).
* ತೀವ್ರ ಬಿಸಿಲಿನ ಶಾಖ,ಕೃಷಿ ತ್ಯಾಜ್ಯ ಸುಡುವುದರಿಂದ ಭೂಮಿಯಲ್ಲಿ ಶಾಖ ಉತ್ಪಾದನೆ ಹೆಚ್ಚಾಗಿ ಒಣ ಇಂಧನ ಉತ್ಪತ್ತಿಯಾಗುತ್ತದೆ.ಇದರಿಂದ ಬೆಳೆಸುಡುವಿಕೆ,ಕಾಡ್ಗಿಚ್ಚು ಉಂಟಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
* ಮಹಿಳೆಯರ ಭಾಗವಹಿಸುವಿಕೆ ಇದ್ದಲ್ಲಿ,ಅರಣ್ಯ ಸಂರಕ್ಷಣೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ವರದಿ ಉಲ್ಲೇಖಿಸಿದೆ.
Take Quiz
Loading...