* ಪ್ರಧಾನಿ ನರೇಂದ್ರ ಮೋದಿ ಸೋಮವಾರ(ಜೂನ್ 16) ಸೈಪ್ರಸ್ ಪ್ರವಾಸದ ವೇಳೆ ಆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III’ ಪ್ರಶಸ್ತಿಯನ್ನು ಸ್ವೀಕರಿಸಿದರು.* ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಈ ಗೌರವ ಪ್ರಧಾನಿಗೆ ಪ್ರದಾನ ಮಾಡಿ ಸನ್ಮಾನಿಸಿದರು.* ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೋದಿ ಹೇಳಿದ್ದಾರೆ: "ಸೈಪ್ರಸ್ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III' ಗೌರವವನ್ನು ನಾನು ವಿನಮ್ರತೆ ಹಾಗೂ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಈ ಗೌರವವನ್ನು ಭಾರತ–ಸೈಪ್ರಸ್ ನಡುವಿನ ದೀರ್ಘಕಾಲೀನ ಸ್ನೇಹಕ್ಕೆ ಅರ್ಪಿಸುತ್ತೇನೆ."* ಇದು ಸೈಪ್ರಸ್ನ ರಾಷ್ಟ್ರಪಿತೃ ಮತ್ತು ಮೊದಲ ಆರ್ಚ್ಬಿಷಪ್ ಆಗಿದ್ದ ಮಕಾರಿಯೋಸ್ ತೃತೀಯರ ಹೆಸರಿನಲ್ಲಿ ಸ್ಥಾಪಿಸಲಾದ ಅತ್ಯುನ್ನತ ಗೌರವವಾಗಿದೆ.ಭಾರತದ ಗೌರವ ಹೆಚ್ಚಿಸುವ ಸಾಧನೆ:* ಪ್ರಧಾನ ಮಂತ್ರಿ ಮೋದಿ ಈಗಾಗಲೇ ಅಮೇರಿಕದ Legion of Merit, ಸೌದಿ ಅರೇಬಿಯಾದ King Abdulaziz Sash, ರಷ್ಯಾದ Order of St. Andrew, ಬಾಂಗ್ಲಾದೇಶದ Liberation War Honour ಮುಂತಾದ ಹಲವಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.* ಸೈಪ್ರಸ್ನ ಈ ಗೌರವ ಅವರು ಪಡೆದ 15ನೇ ಅಂತಾರಾಷ್ಟ್ರೀಯ ನಾಗರಿಕ ಪ್ರಶಸ್ತಿ ಆಗಿದೆ.