* ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಗೌರವವಾದ "ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್" ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರು ಈ ಗೌರವವನ್ನು ಭಾರತ ಮತ್ತು ನಮೀಬಿಯಾ ದೇಶಗಳ ಜನತೆಗೆ ಅರ್ಪಿಸಿದ್ದಾರೆ.* ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ, ಇದನ್ನು ತಮ್ಮ ಜೀವನದ ಹೆಮ್ಮೆಪಡುವ ಕ್ಷಣವೆಂದು ಹೇಳಿದ್ದು, ನಮೀಬಿಯಾ ಸರ್ಕಾರ ಹಾಗೂ ಜನರಿಗೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.* "ಈ ಗೌರವವನ್ನು ನಾನು 140 ಕೋಟಿ ಭಾರತೀಯರ ಪರವಾಗಿ ವಿನಮ್ರವಾಗಿ ಸ್ವೀಕರಿಸುತ್ತೇನೆ" ಎಂದು ಹೇಳಿದರು.* ಭಾರತ-ನಮೀಬಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರಮುಖವಾಗಿ ಉಲ್ಲೇಖಿಸಿದ ಮೋದಿ, ಈ ಸಂಬಂಧ ರಾಜಕೀಯವಲ್ಲದೇ ಪರಸ್ಪರ ಹೋರಾಟ, ನಂಬಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಂದ ಬೆಳೆದದ್ದೆಂದು ಹೇಳಿದರು.* ಭವಿಷ್ಯದಲ್ಲಿಯೂ ಸಹ ಎರಡೂ ದೇಶಗಳು ಅಭಿವೃದ್ಧಿಯ ಹಾದಿಯಲ್ಲಿ ಕೈಗೂಡಿಸಿಕೊಳ್ಳುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.