* ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ದೊರೆತ 1300 ವಸ್ತುಗಳ ಆನ್ಲೈನ್ ಹರಾಜು ಪ್ರಕ್ರಿಯೆ ಬುಧವಾರ(ಆಗಸ್ಟ್ 17) ಆರಂಭಗೊಂಡಿದೆ.* ಇದು ಹರಾಜಿನ ಏಳನೇ ಆವೃತ್ತಿಯಾಗಿದ್ದು, ಪ್ರಧಾನಿ ಮೋದಿ ಅವರ 75ನೇ ಜನ್ಮದಿನದಂದು ಆರಂಭಗೊಂಡಿದೆ. ಹರಾಜು ಅಕ್ಟೋಬರ್ 2ರವರೆಗೆ ನಡೆಯಲಿದೆ.* ಹರಾಜಿನಲ್ಲಿ ಭವಾನಿ ದೇವಿಯ ಮೂರ್ತಿ, ಅಯೋಧ್ಯ ರಾಮಮಂದಿರದ ಮಾದರಿ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಸ್ಮರಣಿಕೆಗಳು, ನಟರಾಜ ವಿಗ್ರಹ, ಪಶ್ಮಿನಾ ಶಾಲೂ, ತಂಜಾವೂರು ಶೈಲಿಯ ರಾಮ ದರ್ಬಾರಿನ ಚಿತ್ರ ಸೇರಿದಂತೆ ಅನೇಕ ವಸ್ತುಗಳಿವೆ.* ಭವಾನಿ ದೇವಿಯ ಮೂರ್ತಿಗೆ ₹10.39 ಲಕ್ಷ, ರಾಮಮಂದಿರದ ಮಾದರಿಗೆ ₹5.5 ಲಕ್ಷ, ಪ್ಯಾರಾಲಿಂಪಿಕ್ ಪದಕ ವಿಜೇತರ ಬೂಟುಗಳಿಗೆ ತಲಾ ₹7.7 ಲಕ್ಷ ಆರಂಭಿಕ ಬೆಲೆ ನಿಗದಿಯಾಗಿದೆ.* ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ವಸ್ತುಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಜನರು ವೀಕ್ಷಿಸಬಹುದು.* 2019ರಿಂದ ಹರಾಜು ನಡೆಯುತ್ತಿದ್ದು, ಮಾರಾಟದಿಂದ ಸಂಗ್ರಹವಾದ ₹50 ಕೋಟಿಗೂ ಅಧಿಕ ಮೊತ್ತವನ್ನು ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ. ಈ ಬಾರಿ ಪ್ಯಾರಾಲಿಂಪಿಕ್ಸ್ ಅಥ್ಲೀಟ್ಗಳ ಸ್ಮರಣಿಕೆಗಳು ವಿಶೇಷ ಆಕರ್ಷಣೆಯಾಗಿವೆ.