* ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರೂ ದಿನಗಳ ಪೋಲೆಂಡ್ ಮತ್ತು ಉಕ್ರೇನ್ ದೇಶಗಳ ಪ್ರವಾಸ ಕೈಗೊಂಡಿದದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 21ರಂದು ತಮ್ಮ ಎರಡು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಪೋಲೆಂಡ್‌ಗೆ ಆಗಮಿಸಿದರು.* 45 ವರ್ಷಗಳ ನಂತರ ಪೋಲೆಂಡ್‌ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ. ಈ ಭೇಟಿಯು ಉಭಯ ದೇಶಗಳೊಂದಿಗೆ ವಿಸ್ತೃತ ಸಂಪರ್ಕಗಳ ನೈಸರ್ಗಿಕ ಮುಂದುವರಿಕೆಯಾಗಿ ಕಾರ್ಯನಿರ್ವಹಿಸುತ್ತದೆ.* ನಂತರ ಮೋದಿ ಅವರು ಉಕ್ರೇನ್ ರಾಜಧಾನಿ ಕೈವ್‌ಗೆ ಆಗಸ್ಟ್ 23ರಂದು ಪ್ರಯಾಣಿಸಲಿದ್ದಾರೆ ಮತ್ತು ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದ ಕುರಿತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರೊಂದಿಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.* ಪೋಲೆಂಡ್ ಪ್ರವಾಸದ ನಂತರ ಮೋದಿ ಅವರು ಆಗಸ್ಟ್ 23ರಂದು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ 'ರೈಲ್ ಪೋರ್ಸ್ ಒನ್' ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. * 1991ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. ದ್ವಿಪಕ್ಷೀಯ ಸಹಕಾರ ಬಲಪಡಿಸಲು ಮತ್ತು ಸದ್ಯದ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಅಧ್ಯಕ್ಷ ಝಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು.