* ಮಾರಿಷಸ್ ಪ್ರಧಾನಿ ನವೀನಚಂದ್ರ ರಾಮಗೂಲಂ ಅವರು ಮಂಗಳವಾರ (ಮಾರ್ಚ್ 12) ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಪ್ರತಿಷ್ಠಿತ ಗೌರವ 'ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಇಂಡಿಯನ್ ಓಷನ್' (GCSK) ಅನ್ನು ಪ್ರಕಟಿಸಿದ್ದಾರೆ.* ಭಾರತ ಮತ್ತು ಮಾರಿಷಸ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.* ಈ ಪ್ರತಿಷ್ಠಿತ ಗೌರವವನ್ನು ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಲಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ವಿದೇಶೀ ದೇಶದಿಂದ ನೀಡಲಾದ 21ನೇ ಅಂತಾರಾಷ್ಟ್ರೀಯ ಪುರಸ್ಕಾರವಾಗಿದೆ. ಈ ವಿಶಿಷ್ಟ ಮಾನ್ಯತೆಯನ್ನು ಪಡೆದ ಐದನೇ ವಿದೇಶೀ ನಾಗರಿಕ ಮೋದಿ ಎಂದು ರಾಮಗೂಲಂ ತಿಳಿಸಿದ್ದಾರೆ.* ”ಪ್ರಧಾನಿ ನವೀನ್ ಮತ್ತು ಮಾರಿಷಸ್‌ನ ಜನರು ನನಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದಾರೆ. ನಿಮ್ಮ ನಿರ್ಧಾರವನ್ನು ನಾನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಇದು ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಸಂಬಂಧಗಳ ಗೌರವ” ಎಂದು ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.