* ಭೂತಾನ್ ಸರ್ಕಾರ ಮೋದಿ ಅವರನ್ನು ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' (Order of the Druk Gyalpo) ಪ್ರಶೆಯನ್ನು ನೀಡಿ ಗೌರವಿಸಿದೆ. * ಭೂತಾನ್ ಸರ್ಕಾರ ಬೇರೆ ದೇಶದ ವ್ಯಕ್ತಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಿದೆ. ಭೂತಾನ್‌ನ ದೊರೆ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್‌ಚುಕ್ ಅವರು ಮೋದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. * ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.* ಪ್ರಶಸ್ತಿ ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿ ಸ್ಥಾಪಿಸಲಾಯಿತು. ಇದು ಭೂತಾನ್‌ನಲ್ಲಿ ಅತ್ಯುನ್ನತ ಗೌರವವಾಗಿದೆ. * 2021ರ ಡಿಸೆಂಬರ್ 17ರಂದು ಭೂತಾನ್‌ನ 114ನೇ ‘ರಾಷ್ಟ್ರೀಯ ದಿನಾಚರಣೆ’ ಸಂದರ್ಭದಲ್ಲಿ ಈ ಪುರಸ್ಕಾರ ಘೋಷಿಸಲಾಗಿತ್ತು. * 2008 ರಲ್ಲಿ ಅವರ ಪವಿತ್ರ ಜೆ ತ್ರಿಜೂರ್ ಟೆಂಜಿನ್ ಡೆಂಡಪ್ ಅವರು (68 ನೇ ಭೂತಾನ್ ನ ಜೆ ಖೆನ್ಪೋ) ಮತ್ತು 2018 ರಲ್ಲಿ ಸನ್ಯಾಸಿಗಳ ಮುಖ್ಯ ಮಠಾಧೀಶರಾದ ಪವಿತ್ರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.