* ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಭದ್ರತೆಯನ್ನು ಸುಧಾರಿಸುವ ಉದ್ದೇಶದಿಂದ, ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ (PM-SYM) ಯೋಜನೆಯನ್ನು ಆರಂಭಿಸಿದೆ, ಇದರಿಂದ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ದೊರಕುತ್ತದೆ.* ಈ ಯೋಜನೆಯಡಿ 60 ವರ್ಷ ಪೂರೈಸಿರುವ ಕಾರ್ಮಿಕರಿಗೆ ಮಾಸಿಕ 3,000 ರೂ. ಪಿಂಚಣಿ ಒದಗಿಸಲಾಗುತ್ತದೆ.* ಅಸಂಘಟಿತ ವಲಯದ ಬೀದಿ ವ್ಯಾಪಾರಿಗಳು, ಮನೆ ಕೆಲಸಗಾರರು ಹಾಗೂ ಕೃಷಿ ಕಾರ್ಮಿಕರನ್ನು ಒಳಗೊಂಡಿದೆ. ಯೋಜನೆ 2024ರ ಕೋಟಿ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾಗಿದೆ.* ಈ ಕಾರ್ಮಿಕರು ಭಾರತದ ಜಿಡಿಪಿಗೆ ಶೇ. 50ರಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.* ಅರ್ಹತಾ ಮಾನದಂಡಗಳು: ಇಪಿಎಫ್, ಇಎಸ್ಐಸಿ ಹಾಗೂ ಎನ್ಪಿಎಸ್ ಸೌಲಭ್ಯ ಹೊಂದಿರುವವರು ಹಾಗೂ ಆದಾಯ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಸರಕಾರಿ ಪಿಂಚಣಿ ಯೋಜನೆಗಳಿಂದ ಪ್ರಯೋಜನ ಗಳನ್ನು ಪಡೆಯುತ್ತಿರುವವರೂ ಈ ಯೋಜನೆ ಯಡಿ ನೋಂದಾಯಿಸಲು ಬರುವುದಿಲ್ಲ.