▪ 'ಪ್ರಧಾನಮಂತ್ರಿ ಮುದ್ರಾ ಯೋಜನೆ' ಎನ್ನುವುದು ಕಾರ್ಪೊರೇತರ್ , ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ರೂಪಾಯಿ 10 ಲಕ್ಷದ ವರೆಗೂ ಮುದ್ರಾ ಸಾಲವನ್ನು ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಸ್ಥಾಪಿಸಿದ ಯೋಜನೆಯಾಗಿದೆ.▪ ಭಾರತದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲಗಳ ವಿತರಣೆಯು ಗಮನಾರ್ಹ ಹೆಚ್ಚಳವನ್ನು ಕಂಡಿದೆ, FY24 ರ ಮೊದಲ ತ್ರೈಮಾಸಿಕದಲ್ಲಿ ₹81,597 ಕೋಟಿ ತಲುಪಿದೆ. ▪ 2022 ರಲ್ಲಿ ವಿತರಿಸಲಾದ ₹62,650 ಕೋಟಿಗೆ ಹೋಲಿಸಿದರೆ ಇದು ಗಮನಾರ್ಹ 23% ಬೆಳವಣಿಗೆಯನ್ನು ಸೂಚಿಸಲಾಗಿದ್ದು, ಇದು ಯೋಜನೆಯ ಪ್ರಾರಂಭದ ನಂತರದ ಮೊದಲ ತ್ರೈಮಾಸಿಕದಲ್ಲಿ ವಿತರಣೆಯಲ್ಲಿನ ಅತ್ಯಧಿಕ ಹೆಚ್ಚಳವಾಗಿದೆ.▪ ಪ್ರಧಾನಮಂತ್ರಿ ಮುದ್ರಾ ಸಾಲವನ್ನು ಶಿಶು, ಕಿಶೋರ್ ,ತರುಣ್ ಎಂಬ ಮೂರು ವರ್ಗಗಳ ಅಡಿಯಲ್ಲಿ ಒದಗಿಸಲಾಗುತ್ತದೆ.▪ ಅರ್ಹ ಸಾಲಗಾರರ ಪ್ರಕಾರಗಳು : ವ್ಯಕ್ತಿಗಳು ,ಮಾಲಿಕತ್ವ ಸಂಸ್ಥೆ, ಖಾಸಗಿ ನಿಯಮಿತ ಕಂಪನಿ, ಪಾಲುದಾರಿಕೆ ಸಂಸ್ಥೆ, ಸಾರ್ವಜನಿಕ ಕಂಪನಿ, ಹಾಗೂ ಯಾವುದೇ ಇತರ ಕಾನೂನು ರೂಪಗಳ ಸಂಸ್ಥೆಗಳು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.