* ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ (ANRF) ಅಡಿಯಲ್ಲಿ ನಡೆದ 'ಪ್ರೈಮ್ ಮಿನಿಸ್ಟರ್ ಪ್ರೊಫೆಸರ್ಶಿಪ್' ಯೋಜನೆಯ ನೋಡಲ್ ಸಂಸ್ಥೆಯಾಗಿ ಬೆಂಗಳೂರು ವಿಶ್ವವಿದ್ಯಾಲಯ ಆಯ್ಕೆಯಾಗಿದೆ.* ಇದು ಕರ್ನಾಟಕದ ಏಕೈಕ ಸಾರ್ವಜನಿಕ ವಿಶ್ವವಿದ್ಯಾಲಯವಾಗಿದ್ದು, ಶೈಕ್ಷಣಿಕ ಶ್ರೇಷ್ಠತೆ ಮತ್ತು ನ್ಯಾಕ್ A++ ಮಾನ್ಯತೆ (CGPA 3.75) ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.* ಈ ಯೋಜನೆಯ ಉದ್ದೇಶ ಸಂಶೋಧನಾ ಸಾಮರ್ಥ್ಯ ವೃದ್ಧಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಮಾರ್ಗದರ್ಶನ ಒದಗಿಸುವುದು.* ಪ್ರಾಧ್ಯಾಪಕರಿಗೆ ವಾರ್ಷಿಕ ₹30 ಲಕ್ಷ ವೇತನ ಮತ್ತು ₹24 ಲಕ್ಷ ಸಂಶೋಧನಾ ಅನುದಾನ ನೀಡಲಾಗುತ್ತದೆ. ಯೋಜನೆಯ ಅವಧಿ ಐದು ವರ್ಷಗಳಿರುತ್ತದೆ.* ಅಧಿಕೃತ ಅರ್ಹರಾಗಿ ನಿವೃತ್ತ ವಿಜ್ಞಾನಿಗಳು, ಅಧ್ಯಾಪಕರು ಮತ್ತು ಪ್ರೊಫೆಸರ್ಆಫ್ ಪ್ರಾಕ್ಟಿಸ್ಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ www.anrfonline.in ಅಥವಾ ಪ್ರೊ. ಅಶೋಕ್ ಡಿ. ಹಂಜಗಿಗೆ (9845634196 / vc@bub.ernet.in) ಸಂಪರ್ಕಿಸಬಹುದು.