Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
'ಪ್ರಹಾರ್' (PRAHAR): ಭಾರತದ ಚೊಚ್ಚಲ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ನೀತಿ
Authored by:
Heena Sheregar
Date:
25 ಫೆಬ್ರುವರಿ 2026
➤
ದೇಶದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಬದಲಾಗುತ್ತಿರುವ ಭಯೋತ್ಪಾದನೆಯ ಸ್ವರೂಪಕ್ಕೆ ತಿರುಗೇಟು ನೀಡಲು ಕೇಂದ್ರ ಗೃಹ ಸಚಿವಾಲಯವು ಮಹತ್ವದ
'ಪ್ರಹಾರ್' (PRAHAR)
ಹೆಸರಿನ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ನೀತಿಯನ್ನು ಬಿಡುಗಡೆ ಮಾಡಿದೆ. ಪಹಾಲ್ಗಮ್ ಉಗ್ರ ದಾಳಿಯ ನಂತರ ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ' (Zero Tolerance) ನೀತಿಯನ್ನು ಇದು ಪ್ರತಿಪಾದಿಸುತ್ತದೆ.
➤
ಪ್ರಹಾರ್ (PRAHAR):
ಇದು ಕೇವಲ ಒಂದು ಶಬ್ದವಲ್ಲ, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೆಸೆಯಲು ರೂಪಿಸಲಾದ ಆರು ಪ್ರಮುಖ ಸ್ತಂಭಗಳ ಸಂಕ್ಷಿಪ್ತ ರೂಪವಾಗಿದೆ.
P : Prevention (ತಡೆಗಟ್ಟುವಿಕೆ: ದಾಳಿ ನಡೆಯುವ ಮೊದಲೇ ಗುಪ್ತಚರ ಮಾಹಿತಿ ಮೂಲಕ ತಡೆಯುವುದು.)
R : Response (ತ್ವರಿತ ಪ್ರತಿಕ್ರಿಯೆ: ದಾಳಿ ನಡೆದ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸುವುದು.)
A : Aggregating Capacity (ಆಂತರಿಕ ಸಾಮರ್ಥ್ಯ ವೃದ್ಧಿ: ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಶಕ್ತಿ ಹೆಚ್ಚಿಸುವುದು.)
H : Human Rights & Rule of Law (ಮಾನವ ಹಕ್ಕು ಮತ್ತು ಕಾನೂನು: ಸಂವಿಧಾನದ ಚೌಕಟ್ಟಿನಲ್ಲೇ ಉಗ್ರರ ದಮನ ಮಾಡುವುದು.)
A : Attenuating (ಶತ್ರುಗಳನ್ನು ದುರ್ಬಲಗೊಳಿಸುವುದು: ಉಗ್ರರ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಮೂಲಗಳನ್ನು ಕತ್ತರಿಸುವುದು.)
R : Recovery & Resilience (ಚೇತರಿಕೆ: ದಾಳಿಯ ನಂತರ ವ್ಯವಸ್ಥೆಯನ್ನು ಮತ್ತೆ ಯಥಾಸ್ಥಿತಿಗೆ ತರುವುದು.)
➤
ಹೊಸ ನೀತಿಯ ಪ್ರಮುಖ ಮುಖ್ಯಾಂಶಗಳು:
1.
ಯಾವುದೇ ಧರ್ಮಕ್ಕೆ ತಳುಕು ಹಾಕಿಲ್ಲ:
ಈ ನೀತಿಯು ಭಯೋತ್ಪಾದನೆಯನ್ನು ಯಾವುದೇ ಧರ್ಮ, ಜನಾಂಗ ಅಥವಾ ರಾಷ್ಟ್ರೀಯತೆಗೆ ಜೋಡಿಸಬಾರದು ಎಂಬ ದೃಢ ನಿಲುವನ್ನು ಹೊಂದಿದೆ. "ಹಿಂಸಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ" ಎಂಬುದು ಇದರ ಮೂಲ ಮಂತ್ರ.
2.
ಆಧುನಿಕ ತಂತ್ರಜ್ಞಾನದ ಸವಾಲುಗಳು:
ಸಾಂಪ್ರದಾಯಿಕ ಯುದ್ಧಗಳಿಗಿಂತ ಇಂದು 'ಡಿಜಿಟಲ್ ವಾರ್' ದೊಡ್ಡದಾಗಿದೆ. 'ಪ್ರಹಾರ್' ನೀತಿಯು ಈ ಕೆಳಗಿನ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ:
- ಡ್ರೋನ್ ತಂತ್ರಜ್ಞಾನ: ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿ ಡ್ರೋನ್ ಮೂಲಕ ನಡೆಯುವ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಸಾಗಾಟಕ್ಕೆ ಬ್ರೇಕ್ ಹಾಕುವುದು.
- ಎನ್ಕ್ರಿಪ್ಟೆಡ್ ಆ್ಯಪ್ಗಳು & ಡಾರ್ಕ್ ವೆಬ್: ಭಯೋತ್ಪಾದಕರು ಬಳಸುವ ರಹಸ್ಯ ಸಂವಹನ ಅಪ್ಲಿಕೇಶನ್ಗಳ ಮೇಲೆ ನಿಗಾ.
- ಕ್ರಿಪ್ಟೋ ಕರೆನ್ಸಿ: ಭಯೋತ್ಪಾದನೆಗೆ ಹರಿಯುವ ಡಿಜಿಟಲ್ ಹಣದ (Crypto Wallets) ಮೇಲೆ ನಿಯಂತ್ರಣ.
=> ನಿರ್ಣಾಯಕ ವಲಯಗಳ ಭದ್ರತೆ:
ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ವಲಯಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು:
- ವಿದ್ಯುತ್ ಜಾಲ (Power Grids), ರೈಲ್ವೆ, ವಾಯುಯಾನ ಮತ್ತು ಬಂದರುಗಳು.
- ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಕೇಂದ್ರಗಳ ರಕ್ಷಣೆ.
➤
ಇಷ್ಟು ದಿನ ಭಾರತದಲ್ಲಿ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗೆ ವಿವಿಧ ಕಾನೂನುಗಳಿದ್ದವು (ಉದಾಹರಣೆಗೆ UAPA). ಆದರೆ, ಎಲ್ಲ ಭದ್ರತಾ ಸಂಸ್ಥೆಗಳನ್ನು (NIA, NSG, ರಾಜ್ಯ ಪೊಲೀಸ್) ಒಂದೇ ಸೂರಿನಡಿ ತರುವ ಮತ್ತು ವಿದೇಶಿ ತಂತ್ರಜ್ಞಾನದ ದಾಳಿಯನ್ನು ಎದುರಿಸುವ ಒಂದು
'ಸಮಗ್ರ ರಾಷ್ಟ್ರೀಯ ನೀತಿ'
ಇರಲಿಲ್ಲ. 'ಪ್ರಹಾರ್' ಈ ಕೊರತೆಯನ್ನು ನೀಗಿಸಲಿದೆ.
Take Quiz
Loading...