* ಚುನಾವಣೆಗಳಲ್ಲಿ ಮತದಾರರನ್ನು ಆಕರ್ಷಿಸಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.* ಇಂತಹ ಯೋಜನೆಗಳಿಂದ ಜನರು ದುಡಿಮೆಯ ಮನಸ್ಥಿತಿಯನ್ನೇ ಕಳೆದುಕೊಳ್ಳುತ್ತಿದ್ದು, ಪರಾವಲಂಬಿ ವರ್ಗ ಸೃಷ್ಟಿಯಾಗುತ್ತಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.* ನಗರ ಪ್ರದೇಶಗಳಲ್ಲಿ ಆಶ್ರಯವಿಲ್ಲದವರಿಗೆ ವಸತಿ ಒದಗಿಸುವ ಕುರಿತು ಇ.ಆರ್. ಕುಮಾರ್ ಸಲ್ಲಿಸಿದ ಮನವಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಮತ್ತು ಆಗಸ್ಟಿನ್ ಜಾಜ್ರ್ ಮಸೀಹ್ ಅವರನ್ನೊಳಗೊಂಡ ಪೀಠವು, ಉಚಿತ ಯೋಜನೆಗಳನ್ನು ಪ್ರಕಟಿಸುವ ಬದಲು, ನಾಗರಿಕರಲ್ಲಿ ದೇಶದ ಪ್ರಗತಿಗೆ ಶ್ರಮಿಸುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದೆ.* ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾಜ್ರ್ ಮಸೀಹ್ ಅವರ ಪೀಠವು, ನಿರಾಶ್ರಿತರಿಗೆ ಉಚಿತ ಸೌಲಭ್ಯಗಳ ಬದಲು, ದೇಶದ ಅಭಿವೃದ್ಧಿಗೆ ದುಡಿಯುವ ಮನಸ್ಥಿತಿ ಮೂಡಿಸಬೇಕು ಎಂದು ಸಲಹೆ ನೀಡಿದೆ.* ನ್ಯಾಯಪೀಠದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು, ''ಜನರಿಗೆ ಸೂರು ಇದ್ದರೆ ಅವರು ಸಮಾಜದ ಮುಖ್ಯ ವಾಹಿನಿಯ ಭಾಗವಾಗಿರುತ್ತಾರೆ. ಇಲ್ಲಿ ಸಮಸ್ಯೆಯೆಂದರೆ ಅವರಿಗೆ ಸೂರೇ ಇಲ್ಲ,'' ಎಂದರು.* ಪ್ರಶಾಂತ್ ಭೂಷಣ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾ. ಗವಾಯಿ ಅವರು ಕೆಲವು ರಾಜ್ಯಗಳು ಘೋಷಿಸಿರುವ ಉಚಿತ ಪಡಿತರ ಮುಂತಾದ ಫ್ರೀ ಯೋಜನೆಗಳಿಂದ ಜನರು ಕೆಲಸ ಮಾಡಲು ಬಯಸುತ್ತಿಲ್ಲ. ನಾನು ಸಹ ಕೃಷಿ ಕುಟುಂಬದಿಂದ ಬಂದಿದ್ದೇನೆ. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಮುನ್ನ ಘೋಷಿಸಲಾದ ಫ್ರೀ ಗಳಿಂದಾಗಿ, ವ್ಯವಸಾಯಕ್ಕೆ ಕಾರ್ಮಿಕರು ಸಿಗದಂತಾಗಿದೆ. ಏಕೆಂದರೆ, ಪ್ರತಿಯೊಬ್ಬರಿಗೂ ಮನೆಗೇ ಉಚಿತ ಪಡಿತರ ತಲುಪುತ್ತಿದೆ,'' ಎಂದರು.