* ಮೆಟಾ ಜಗತ್ತಿನ 5 ಉಪಖಂಡಗಳನ್ನು ಸಂಪರ್ಕಿಸುವ ಅತ್ಯಂತ ಉದ್ದದ ಸಮುದ್ರ ಅಡಿಯಲ್ಲಿ ಹಾಕುವ ಕೇಬಲ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.* ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಇತರೆ ಪ್ರಮುಖ ದೇಶಗಳನ್ನು ಸಂಪರ್ಕಿಸಲು ಸಮುದ್ರದಡಿ 50 ಸಾವಿರ ಕಿ.ಮೀ. ಉದ್ದದ ಕೇಬಲ್ ಅಳವಡಿಸುವ ಲಕ್ಷಾಂತರ ಕೋಟಿ ರುಪಾಯಿ ವೆಚ್ಚದ ಮೆಗಾ ಯೋಜನೆಯೊಂದನ್ನು ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ಕೈಗೆತ್ತಿಕೊಳ್ಳಲಿದೆ.* "ಪ್ರಾಜೆಕ್ಟ್ ವಾಟರ್ ವರ್ಥ್" ಹೆಸರಿನ ಈ ಯೋಜನೆ ಭಾರತದ ಡಿಜಿಟಲ್ ಆರ್ಥಿಕತೆಗೆ ನೆರವು ನೀಡಲಿದೆ. ಇದು ಬಹು-ವರ್ಷದ, ಬಹು-ಬಿಲಿಯನ್ ಡಾಲರ್ ಹೂಡಿಕೆ ಎಂದು ಮೆಟಾ ತಿಳಿಸಿದೆ.* ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ. Meta ಭಾರತ ಮತ್ತು ಅಮೆರಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಈ ಯೋಜನೆ ಕುರಿತು ಪ್ರಸ್ತಾಪಿಸಲಾಗಿದೆ..* ಯೋಜನೆಯಡಿ ಹಿಂದೂ ಮಹಾಸಾಗರದಲ್ಲಿ ಅಳವಡಿಸಲಾಗುವ ಈ ಕೇಬಲ್ಗೆ ಹಣಕಾಸು ನೆರವು, ನಿರ್ವಹಣೆ, ರಿಪೇರಿಯ ಜವಾಬ್ದಾರಿಯನ್ನು ಭಾರತವು ವಹಿಸಿಕೊಳ್ಳಲಿದೆ.* 24 ಫೈಬರ್ ಪೇರಿನ ಈ ಕೇಬಲ್ ಪ್ರಾಜೆಕ್ಟ್ ಸಮುದ್ರದ 7,000 ಮೀಟರ್ ಆಳದಲ್ಲಿ ಹಾದು ಹೋಗಲಿದ್ದು, ಕಡಲತೀರಗಳ ಬಳಿ ಹಾನಿಯಿಂದ ತಪ್ಪಿಸಲು ವಿಶೇಷ ತಂತ್ರಗಳನ್ನು ಬಳಸಲಿದೆ.* ವಿಶ್ವದ ಅತಿದೊಡ್ಡ, ಅತ್ಯಾಧುನಿಕ ತಂತ್ರಜ್ಞಾನದ ಸಮುದ್ರದಡಿ ಅಳವಡಿಸುವ ಈ ಕೇಬಲ್ ಯೋಜನೆ 5 ಉಪಖಂಡಗಳನ್ನು ಸಂಪರ್ಕಿಸಲಿದೆ. ಈ ದಶಕದ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಭಾರತಕ್ಕೆ ಅನುಕೂಲವಾಗಲಿದೆ.* ಕಳೆದ ವರ್ಷದಿಂದ ಈ ಯೋಜನೆಯ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು, ಇದರ ಮೌಲ್ಯ ಸುಮಾರು $10 ಬಿಲಿಯನ್ ಎಂದು ಅಂದಾಜಿಸಲಾಗಿದೆ.