Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪ್ರಾಜೆಕ್ಟ್ ಡಾಲ್ಫಿನ್ ಅಡಿಯಲ್ಲಿ ಎರಡನೇ ಹಂತದ ರಾಷ್ಟ್ರವ್ಯಾಪಿ ಡಾಲ್ಫಿನ್ ಸಮೀಕ್ಷೆ ಆರಂಭ
Authored by:
Akshata Halli
Date:
20 ಜನವರಿ 2026
➤
ಭಾರತ ಸರ್ಕಾರವು
ಪ್ರಾಜೆಕ್ಟ್ ಡಾಲ್ಫಿನ್
ಅಡಿಯಲ್ಲಿ ದೇಶದ
ಎರಡನೇ ಹಂತದ (Second Range-wide) ನದಿ ಮತ್ತು ಎಸ್ಟ್ಯುರೈನ್ ಡಾಲ್ಫಿನ್ ಜನಸಂಖ್ಯೆ ಸಮೀಕ್ಷೆಯನ್ನು
ಉತ್ತರ ಪ್ರದೇಶದ
ಬಿಜ್ನೋರ್
ನಿಂದ ಅಧಿಕೃತವಾಗಿ ಆರಂಭಿಸಿದೆ. ಈ ಸಮೀಕ್ಷೆಯು ಡಾಲ್ಫಿನ್ಗಳ ಜನಸಂಖ್ಯೆ, ವಾಸಸ್ಥಳದ ಸ್ಥಿತಿ ಮತ್ತು ಅಪಾಯಗಳನ್ನು ಮರುಮೌಲ್ಯಮಾಪನ ಮಾಡಲು ಉದ್ದೇಶಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್
ಅವರು ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ಡಾಲ್ಫಿನ್ ಸಮೀಕ್ಷೆಗೆ ಚಾಲನೆ ನೀಡಿದ್ದು, ಅದರ ಪ್ರೋಟೋಕಾಲ್ ಅನ್ನು ಕಳೆದ ವನ್ಯಜೀವಿ ವಾರದಲ್ಲಿ ಡೆಹ್ರಾಡೂನ್ನಲ್ಲಿ ಬಿಡುಗಡೆ ಮಾಡಿದ್ದರು.
➤
ಮೊದಲ ಹಂತದ ಡಾಲ್ಫಿನ್ ಸಮೀಕ್ಷೆ (2021–23)
ಫಲಿತಾಂಶವನ್ನು ಪ್ರಧಾನಿ ಅವರು 2025ರ ಮಾರ್ಚ್ನಲ್ಲಿ
ಗಿರ್ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL)
ಸಭೆಯಲ್ಲಿ ಬಿಡುಗಡೆ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಎರಡನೇ ಹಂತದ ಸಮೀಕ್ಷೆ ಆರಂಭವಾಗಿದೆ.
➤
ಈ ಡಾಲ್ಫಿನ್ ಸಮೀಕ್ಷೆಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಸಂಯೋಜನೆಯೊಂದಿಗೆ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII), ಡೆಹ್ರಾಡೂನ್ ಮುಖ್ಯ ಸಂಸ್ಥೆಯಾಗಿ, WWF ಇಂಡಿಯಾ, ಆರಣ್ಯಕ್, ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾ ಹಾಗೂ ರಾಜ್ಯ ಅರಣ್ಯ ಇಲಾಖೆಗಳ ಸಹಕಾರದಲ್ಲಿ ನಡೆಸಲಾಗುತ್ತಿದೆ.ಗಣತಿಗಾಗಿ
➤
ಈ ಸಮೀಕ್ಷೆಯಲ್ಲಿ
26 ಸಂಶೋಧಕರು
ಮೂರು ದೋಣಿಗಳ ಮೂಲಕ ಕಾರ್ಯನಿರ್ವಹಿಸಿ,
ಹೈಡ್ರೋಫೋನ್ಗಳ
ಸಹಾಯದಿಂದ ನೀರಿನ ಒಳಗಿನ ಧ್ವನಿಯನ್ನು ದಾಖಲಿಸುವುದರ ಜೊತೆಗೆ ಪರಿಸರ ಮತ್ತು ಡಾಲ್ಫಿನ್ ವಾಸಸ್ಥಳದ ಪ್ರಮುಖ ಅಂಶಗಳನ್ನು ದಾಖಲಿಸುತ್ತಿದ್ದಾರೆ.
ಡಾಲ್ಫಿನ್ ಸಮೀಕ್ಷೆಯನ್ನು
ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬಿಜ್ನೋರ್ನಿಂದ ಗಂಗಾಸಾಗರದವರೆಗೆಗಿನ ಗಂಗಾ ನದಿ ಹಾಗೂ ಇಂಡಸ್ ನದಿಯ ಭಾರತೀಯ ಭಾಗವನ್ನು ಒಳಗೊಂಡಿದ್ದು, ಎರಡನೇ ಹಂತದಲ್ಲಿ ಬ್ರಹ್ಮಪುತ್ರ ನದಿ, ಗಂಗೆಯ ಉಪನದಿಗಳು, ಸುಂದರ್ಬನ್ಸ್ ಮತ್ತು ಒಡಿಶಾದ ಕರಾವಳಿ ಹಾಗೂ ನದಿ ಪ್ರದೇಶಗಳನ್ನು ಸಮೀಕ್ಷೆ ಮಾಡಲಾಗುತ್ತದೆ.
➤ ಸಮೀಕ್ಷೆಯಲ್ಲಿ ಒಳಗೊಂಡಿರುವ ಡಾಲ್ಫಿನ್ ಜಾತಿಗಳು:-
- ಗಂಗಾ ನದಿ ಡಾಲ್ಫಿನ್ (Susu)
- ಇಂಡಸ್ ನದಿ ಡಾಲ್ಫಿನ್
- ಇರವಾಡಿ ಡಾಲ್ಫಿನ್
(ಈ ಬಾರಿ ಹೊಸದಾಗಿ ಸೇರಿಸಲಾಗಿದೆ)
➤ ಪ್ರಾಜೆಕ್ಟ್ ಡಾಲ್ಫಿನ್
:ಭಾರತ ಸರ್ಕಾರದ ರಾಷ್ಟ್ರೀಯ ಸಂರಕ್ಷಣಾ ಯೋಜನೆಯಾಗಿದ್ದು, ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಆಗಿರುವ ಗಂಗಾ ನದಿ ಡಾಲ್ಫಿನ್ಗಳ ಸಂರಕ್ಷಣೆ, ನದಿ ಪರಿಸರ ವ್ಯವಸ್ಥೆಯ ರಕ್ಷಣೆ ಹಾಗೂ ಮಾಲಿನ್ಯ, ಮೀನುಗಾರಿಕೆಯಿಂದ ಉಂಟಾಗುವ ಸಾವು ಮತ್ತು ವಾಸಸ್ಥಳ ನಾಶದಂತಹ ಅಪಾಯಗಳನ್ನು ಕಡಿಮೆ ಮಾಡುವುದೇ ಇದರ ಮುಖ್ಯ ಗುರಿಯಾಗಿದೆ.
➤
ಮೊದಲ ಹಂತದ ಸಮೀಕ್ಷೆಯ ಪ್ರಮುಖ ಕಂಡುಬಂದ ಅಂಶಗಳು
=> ಒಟ್ಟು ಡಾಲ್ಫಿನ್ ಸಂಖ್ಯೆ:
6,327,
ಗಂಗಾ ನದಿ ಡಾಲ್ಫಿನ್:
6,324
=> ರಾಜ್ಯವಾರು ಅಗ್ರಸ್ಥಾನ:
- ಉತ್ತರ ಪ್ರದೇಶ – 2,397
- ಬಿಹಾರ – 2,220
=> ಬ್ರಹ್ಮಪುತ್ರ ಕಣಿವೆ:
635 ಡಾಲ್ಫಿನ್ಗಳು (ಸ್ಥಿರ ಜನಸಂಖ್ಯೆ)
=> ಇಂಡಸ್ ನದಿ ಡಾಲ್ಫಿನ್:
ಪಂಜಾಬ್ನ ಬೀಸ್ ನದಿಯಲ್ಲಿ ಕೇವಲ 3
➤
ಪ್ರಮುಖ ಡಾಲ್ಫಿನ್ ಸಂರಕ್ಷಣಾ ಪ್ರದೇಶಗಳು:
#
ವಿಕ್ರಮಶೀಲ ಗಂಗಾ ಡಾಲ್ಫಿನ್ ಅಭಯಾರಣ್ಯ – ಬಿಹಾರ: ಭಾರತದಲ್ಲಿನ ಏಕೈಕ ಡಾಲ್ಫಿನ್ ಅಭಯಾರಣ್ಯ
# ಬೀಸ್ ಸಂರಕ್ಷಣಾ ರಿಸರ್ವ್ – ಪಂಜಾಬ್: ಇಂಡಸ್ ನದಿ ಡಾಲ್ಫಿನ್
ಈ ಸಮೀಕ್ಷೆ
ವಿಜ್ಞಾನಾಧಾರಿತ ನೀತಿ ನಿರ್ಧಾರ
ಮತ್ತು ಪರಿಣಾಮಕಾರಿ ಸಂರಕ್ಷಣೆಗೆ ಸಹಕಾರ ನೀಡಲಿದೆ.
Take Quiz
Loading...