* ಪೋಲೆಂಡ್ ನ ಮದ್ಯ ತಯಾರಿಕಾ ಸಂಸ್ಥೆ ಡಿಕ್ಟೇಡರ್ ನ ನೂತನ ಸಿಇಒ ಸ್ಥಾನಕ್ಕೆ ಮಹಿಳಾ ರೋಬೋಟ್ ವನ್ನು ನೇಮಿಸಲಾಗಿದೆ.ಈ ಮೂಲಕ ಡಿಕ್ಟೇಡರ್ ಸಂಸ್ಥೆಯು ಜಗತ್ತಿನ ಗಮನ ಸೆಳೆದಿದೆ. ಈ ಮಹಿಳಾ ರೋಬೋಟ್ ಗೆ ಮಿಕ ಎಂದು ಹೆಸರಿಡಲಾಗಿದೆ.* ಕೃತಕ ಬುದ್ಧಿಮತ್ತೆ ಹೊಂದಿರುವ ಈ ಮಹಿಳಾ ರೋಬೋಟ್ ಕಂಪನಿಯ ಪ್ರಗತಿಗೆ ಹೊಸ ತಂತ್ರಗಾರಿಕೆಯನ್ನು ಹೆಣೆಯುವುದು, ಕಾರ್ಪೊರೇಟ್ ಸಂವಹನ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಲಿದೆ.* ಉದ್ಯೋಗಿಗಳ ನೇಮಕಾತಿ ಮತ್ತು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ಮಿಕಾ ಹಸ್ತ ಕ್ಷೇಪ ಮಾಡುವುದಿಲ್ಲ ಎಂದು ಡಿಕ್ಟೇಡರ್ ಸಂಸ್ಥೆ ತಿಳಿಸಿದೆ.