* ಚೆಸ್ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆಯನ್ನು ದಾಖಲಿಸಿದೆ. ಪಂಜಾಬ್ ಮೂಲದ ಯುವ ಚೆಸ್ ಪ್ರತಿಭೆ ನವಿತ್ಸಬೀರ್ ಸಿಂಗ್ ವಾಲಿಯಾ ಅವರಿಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ವತಿಯಿಂದ ಅತ್ಯುನ್ನತ ಗೌರವವಾದ ಅಂತರರಾಷ್ಟ್ರೀಯ ಮಾಸ್ಟರ್ (International Master – IM) ಬಿರುದು ಪ್ರದಾನ ಮಾಡಲಾಗಿದೆ.* ಇದು ಚೆಸ್ ಪ್ರಪಂಚದಲ್ಲಿ ಅತ್ಯಂತ ಗೌರವಾನ್ವಿತ ಬಿರುದುಗಳಲ್ಲಿ ಒಂದಾಗಿದೆ. ಈ ಬಿರುದು ಪಡೆಯಲು ಆಟಗಾರನು ವಿಶೇಷ ರೇಟಿಂಗ್‌ಗಳನ್ನು, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಮಾನದಂಡಗಳನ್ನು ಪೂರೈಸಬೇಕು.* ಈ ಗಮನಾರ್ಹ ಸಾಧನೆಯು ಜಲಂಧರ್ ನ ಧುಶ್ಯೆಂತ ಶರ್ಮಾ ನಂತರ ಪಂಜಾಬ್ ನ ಎರಡನೇ ಅಂತರರಾಷ್ಟ್ರೀಯ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.